ETV Bharat / state

ಜನರ ತೀರ್ಪಿಗೆ ನಾವು ತಲೆಬಾಗಲೇಬೇಕು: ಅನಿತಾ ಕುಮಾರಸ್ವಾಮಿ

ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್​​​​​ ಹೀನಾಯ ಸೋಲು ಕಂಡಿದೆ. ಜನರು ಕೊಟ್ಟಿರುವ ತೀರ್ಪಿಗೆ ನಾವು ತಲೆಬಾಗಬೇಕೆಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

Anita Kumaraswamy
ಅನಿತಾ ಕುಮಾರಸ್ವಾಮಿ
author img

By

Published : Dec 11, 2019, 4:22 PM IST

ರಾಮನಗರ: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್​​​​​ ಸೋಲು ಕಂಡಿದೆ. ಜನರು ಕೊಟ್ಟಿರುವ ತೀರ್ಪಿಗೆ ನಾವು ತಲೆಬಾಗಲೇ ಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರ ಪ್ರವಾಸ

ನಗರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಕ್ಷೇತ್ರ ಪ್ರವಾಸದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಅವರು, ಮಂಡ್ಯದಲ್ಲೂ ಜೆಡಿಎಸ್​ಗೆ ಸೋಲಾಗಿದೆ. ರಾಜಕೀಯ ಯಾವತ್ತೂ ನಿಂತ ನೀರಲ್ಲ. ಇಂದು ಇದ್ದದ್ದು ನಾಳೆ ಬದಲಾಗುತ್ತೆ. ಆವರೆಗೂ ತಾಳ್ಮೆಯಿಂದಿರಬೇಕಷ್ಟೇ. ಜನರಿಗೆ ಈಗಲೂ ನಮ್ಮ ಬಗ್ಗೆ ನಂಬಿಕೆ ಇದೆ ಎಂದರು.

ಜೆಡಿಎಸ್​ ರಾಜ್ಯಾಧ್ಯಕ್ಷರು ರಾಜೀನಾಮೆ ಕೊಡುವ ವಿಚಾರ ನನಗೆ ಗೊತ್ತಿಲ್ಲ. ದೊಡ್ಡವರ ತೀರ್ಮಾನಕ್ಕೆ ಬದ್ಧವಾಗಿರಬೇಕು. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಅಧಿಕಾರಕ್ಕಾಗಿ ಇನ್ನೊಂದು ಪಕ್ಷಕ್ಕೆ ಹೋದವರನ್ನು ಜನರು ಸ್ವೀಕರಿಸಿದ್ದಾರಲ್ಲ ಅದೇ ನನಗೆ ಆಶ್ಚರ್ಯ ಆಗಿದೆ ಎಂದರು. ಈ ಚುನಾವಣೆಯಲ್ಲಿ ಯಾವ ಅಂಶ ಪ್ರಭಾವ ಬೀರಿದೆ ಎಂಬುದು ನನಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಜನರಿಗೆ ಮನವರಿಕೆಯಾಗಬೇಕು ಅನಿತಾ ಕುಮಾರಸ್ವಾಮಿ ಹೇಳಿದ್ರು.

Intro:Body:ರಾಮನಗರ : ರಾಜ್ಯ ಉಪಚುನಾವಣೆಯಲ್ಲಿ ಜೆಡಿಎಸ್ ಗೆ ಸೋಲು ಕಂಡಿದೆ ಇದು ಜನರು ಕೊಟ್ಟಿರುವ ತೀರ್ಪು ನಾವು ತಲೆಬಾಗಬೇಕು ಎಂದು ಶಾಸಕಿ ಅನಿತಾಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಕ್ಷೇತ್ರ ಪ್ರವಾಸದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಅವರು ಮಂಡ್ಯದಲ್ಲೂ ಜೆಡಿಎಸ್ ಗೆ ಸೋಲಾಗಿದೆ , ರಾಜಕೀಯ ಯಾವತ್ತು ನಿಂತ ನೀರಲ್ಲ, ಇವತ್ತು ಇದ್ದದ್ದು ನಾಳೆ ಬದಲಾವಣೆಯಾಗುತ್ತೆ
ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಅಷ್ಟೇ, ಜನ ಈಗಲೂ ನಮ್ಮ ಪರವಾಗಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷರು ರಾಜೀನಾಮೆ ಕೊಡುವ ವಿಚಾರ ನನಗೆ ಗೊತ್ತಿಲ್ಲ, ದೊಡ್ಡವರ ತೀರ್ಮಾನಕ್ಕೆ ಬದ್ಧವಾಗಿರಬೇಕು ಅಷ್ಟೇ
ಚುನಾವಣೆಗಳು ಬರ್ತಾನೆ ಇರ್ತಾವೆ ಆದರೆ ಜನ ಇಂತಹವರನ್ನು ಸ್ವೀಕರಿಸಿದ್ದಾರಲ್ಲ ಅದೇ ನನಗೆ ಆಶ್ಚರ್ಯ ಎಂದ ಅವರು ಒಂದು ಪಕ್ಷದಿಂದ ಗೆದ್ದು, ಅಧಿಕಾರಕ್ಕೆ ಇನ್ನೊಂದು ಪಕ್ಷಕ್ಕೆ ಹೋದವರನ್ನ ಜನ ಗೆಲ್ಲಿಸಿದ್ದಾರೆ , ಈ ಚುನಾವಣೆಯಲ್ಲಿ ಯಾವ ಅಂಶ ಪ್ರಭಾವ ಬೀರಿದೆ ಎಂಬುದು ನನಗೆ ಗೊತ್ತಿಲ್ಲ ಮುಂದಿನ ದಿನಗಳಲ್ಲಿ ಜನರಿಗೆ ಮನವರಿಕೆಯಾಗಬೇಕು ಅಷ್ಟೇ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.