ರಾಯಚೂರು: ಅಯೋಧ್ಯೆಯಲ್ಲಿ ಆದಿಕವಿ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸುತ್ತೇನೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದ್ದಾರೆ.
ಲಿಂಗಸಗೂರಿನಲ್ಲಿ ಮಹರ್ಷಿ ವಾಲ್ಮೀಕಿ ಸಮಾಜ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ರಾಮಾಯಣ ಗ್ರಂಥದ ಮೂಲಕ ಸತ್ಯ, ಪ್ರಾಮಾಣಿಕತೆ, ನಂಬಿಕೆ, ನಿಷ್ಠೆ ಸೇರಿದಂತೆ ವಿವಿಧ ಪಾತ್ರಗಳ ಮೂಲಕ ಮಹತ್ವದ ಸಂದೇಶ ಸಾರಿದ್ದಾರೆ.
ರಾಮಯಾಣ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ವಿಷಯ ಆಧರಿಸಿ ನೀಡಿರುವ ವಿಚಾರಧಾರೆಗಳು ಸಮಾಜಕ್ಕೆ ಮಹತ್ವದ ಸಂದೇಶ ನೀಡಿವೆ. ಹೀಗಾಗಿ ಅವರನ್ನು ಪರಿವರ್ತನೆ ಹರಿಕಾರ ಎಂದು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮಹರ್ಷಿ ವಾಲ್ಮೀಕಿ ಹೆಸರಲ್ಲಿ ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಒತ್ತಾಯಿಸಿರುವೆ ಎಂದರು.
ನಗರದಲ್ಲಿ ವಾಲ್ಮೀಕಿ ವೃತ್ತದ ಬಳಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮೊದಲಿಗೆ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಪ್ರತಿ ವರ್ಷ ಮಹರ್ಷಿ ವಾಲ್ಮೀಕಿ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಗುತಿತ್ತು. ಆದರೆ ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ಸರಳವಾಗಿ ಆಯೋಜಿಸಲಾಗಿತ್ತು.