ETV Bharat / state

ಹೆದ್ದಾರಿಯಲ್ಲಿ ಸಾರಿಗೆ ಬಸ್​ ನಿಲುಗಡೆ: ಸಾರ್ವಜನಿಕರ ಪ್ರಯಾಣಕ್ಕೆ ಭಾರೀ ತೊಂದರೆ

ಲಿಂಗಸುಗೂರು ಹೃದಯಭಾಗದಲ್ಲಿರುವ ಬಸ್ ನಿಲ್ದಾಣ ಬಳಿಯ ಹೆದ್ದಾರಿ ಮೇಲೆಯೇ ಸಾರಿಗೆ ಸಂಸ್ಥೆ ಬಸ್​ಗಳನ್ನು ನಿಲ್ಲಿಸುತ್ತಿದ್ದು, ಸಾರ್ವಜನಿಕರ ಪ್ರಯಾಣಕ್ಕೆ ಭಾರೀ ತೊಂದರೆಯನ್ನುಂಟು ಮಾಡಿದೆ.

author img

By

Published : Aug 27, 2020, 9:14 PM IST

Transportation agency buses Parking  on highways
ಹೆದ್ದಾರಿಗಳ ಮೇಲೆ ಸಾರಿಗೆ ಬಸ್​ಗಳ ನಿಲುಗಡೆ: ಸಾರ್ವಜನಿಕರ ಪ್ರಯಾಣಕ್ಕೆ ಭಾರೀ ತೊಂದರೆ

ರಾಯಚೂರು: ಜಿಲ್ಲೆಯ ಲಿಂಗಸುಗೂರು ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣ ಬಳಿಯ ಹೆದ್ದಾರಿಗಳ ಮೇಲೆಯೇ ಸಾರಿಗೆ ಸಂಸ್ಥೆ ಬಸ್​ಗಳನ್ನು ನಿಲ್ಲಿಸುತ್ತಿದ್ದು, ಸಾರ್ವಜನಿಕರ ಪ್ರಯಾಣಕ್ಕೆ ಭಾರೀ ತೊಂದರೆಯನ್ನುಂಟು ಮಾಡಿದೆ.

ಬಸ್ ನಿಲ್ದಾಣದ ನೂರು ಮೀಟರ್ ವರೆಗೆ ವಾಹನ ನಿಲುಗಡೆಗೆ ನಿಷೇಧವಿದೆ. ಕಾರು, ಜೀಪ್​ ಸೇರಿ ಇತರೆ ವಾಹನಗಳು ನಿಂತಾಗ ದಂಡ ವಿಧಿಸುತ್ತಿದ್ದ ಪೊಲೀಸರು ಹಾಗೂ ಬೀದಿ ಬದಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸುವ ಪುರಸಭೆ ಅಧಿಕಾರಿಗಳು ಎರಡು ಮುಖ್ಯ ರಸ್ತೆಗಳು ಸಂಪೂರ್ಣ ಅತಿಕ್ರಮಣಗೊಂಡಿದ್ದರೂ ಮೌನಕ್ಕೆ ಶರಣಾಗಿದ್ದಾರೆ. ಟ್ರಾಫಿಕ್ ಜಾಮ್​ಗೆ​ ಸಂಬಂಧಿಸಿ ಸಾರಿಗೆ ಸಂಸ್ಥೆ ಬಸ್​ಗಳಿಗೊಂದು ಕಾನೂನು, ಇತರೆ ವಾಹನಗಳಿಗೊಂದು ಕಾನೂನಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಮುಂದಾಗದಿದ್ದರೆ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸುವುದಾಗಿ ಕೆಲ ಸಂಘಟನೆ ಮುಖಂಡರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.