ETV Bharat / state

ರಾಯಚೂರು SSLC ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣಾ ತರಬೇತಿ..

2019-20ನೇ ಸಾಲಿನ ಎಸ್ಎಸ್ಎಲ್​ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ನಗರದ ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆಯಲ್ಲಿ ವಿಶೇಷ ತರಬೇತಿ ಹಾಗೂ ಘಟಕ ಪರೀಕ್ಷೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉತ್ತಮ ಅಂಕ ಗಳಿಸಿ ಜಿಲ್ಲೆಗೆ ಹೆಸರು ತರುವಂತೆ ವಿದ್ಯಾರ್ಥಿಗಳಿಗೆ ಉತ್ತೇಜಿಸಲಾಯಿತು.

author img

By

Published : Nov 25, 2019, 2:35 PM IST

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣಾ ಕಾರ್ಯಕ್ರಮ

ರಾಯಚೂರು : ನಗರದ ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆಯಲ್ಲಿ ಇಂದು 2019-20ನೇ ಸಾಲಿನ ಎಸ್ಎಸ್ಎಲ್​ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಿಶೇಷ ತರಬೇತಿ ಹಾಗೂ ಘಟಕ ಪರೀಕ್ಷೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಕೆಳಮಟ್ಟದಲ್ಲಿದೆ. ತೀವ್ರ ಮುಜುಗರಕ್ಕೀಡಾಗಿದ್ದೇವೆ‌. ಅದನ್ನು ಹೋಗಲಾಡಿಸಲು ಈ ಬಾರಿ ವಿಶೇಷ ತರಬೇತಿ, ಘಟಕ ಪರೀಕ್ಷೆಗಳು ಹಾಗೂ ಇತರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಗಮನ ಹರಿಸಿ ಆಸಕ್ತಿಯಿಂದ ಓದುವ ಜೊತೆಗೆ ಉತ್ತಮ ಅಂಕಗಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣಾ ತರಬೇತಿ..

ನಂತರ ಜಿಪಂ ಸಿಇಒ ಲಕ್ಷ್ಮಿಕಾಂತ್ ರೆಡ್ಡಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ನಮ್ಮ ಜಿಲ್ಲೆಯ ಫಲಿತಾಂಶ ನೋಡಬೇಕಾದ್ರೆ ಕೆಳಗಿನಿಂದ ಹುಡುಕಾಡಬೇಕಿದೆ. ಯಾದಗಿರಿ ಹೊರತು ಪಡಿಸಿ ಕೊನೆ ಸ್ಥಾನದಲ್ಲಿರುತ್ತೇವೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸಮಾಡಿ ಒಳ್ಳೆಯ ಫಲಿತಾಂಶ ಪಡೆದು ಟಾಪ್​ 5 ಜಿಲ್ಲೆಯಲ್ಲಿ ಬರುವಂತೆ ಮಾಡಬೇಕು ಎಂದು ತಿಳಿಸಿದರು.

Intro:ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆಯಲ್ಲಿ ಇಂದು 2019-20 ನೇ ಸಾಲಿನ ಎಸ್ ಎಸ್ ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಿಶೇಷ ಕೋಚಿಂಗ್ ತರಬೇತಿ ಹಾಗೂ ಘಟಕ ಪರೀಕ್ಷೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

Body:ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಉದ್ಘಾಟಿಸಿದರು, ನಂತರ ಮಾತನಾಡಿದ ಅವರು, ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಕೆಳಮಟ್ಟದಲ್ಲಿ ಇರುವ ಕಾರಣ ತೀವ್ರ ಮುಜುಗರಕ್ಕೀಡಾಗಿದ್ದೇವೆ‌ ಅದನ್ನು ಹೋಗಲಾಡಿಸಲು ಈ ಬಾರಿ ವಿಶೇಷ ತರಬೇತಿ, ಘಟಕ ಪರೀಕ್ಷೆಗಳು ಹಾಗೂ ಇತರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ದಿಸೆಯಲ್ಲಿ ವಿದ್ಯಾರ್ಥಿಗಳು ಗಮನ ಹರಿಸಿ ಆಸಕ್ತಿಯಿಂದ ಓದುವ ಜೊತೆಗೆ ಉತ್ತಮ ಅಂಕಗಳಿಸಲು ಪ್ರಯತ್ನಿಸಬೇಕು ಆ ಮೂಲಕ ಜಿಲ್ಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಬರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಂತರ ಜಿ.ಪಂ.ಸಿಇಓ ಲಕ್ಷ್ಮಿ ಕಾಂತ್ ರೆಡ್ಡಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ್ ಅವರು, ನಮ್ಮ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಬಂದಾಗ ನೋಡಬೇಕಾದ್ರೆ ಕೆಲಗಿನಿಂದ ಹುಡುಕಾಡಬೇಕಿದೆ ಯಾದಗಿರಿಯನ್ನು ಹೊರತು ಪಡಿಸಿ ಕೊನೆಯ ಸ್ಥಾನದಲ್ಲಿರುತ್ತೆ ಈ ಬಾರಿ ಹೀಗಾಗಬಾರದು ಅದಕ್ಕೆ ಹಲವಾರು ಕಾರ್ತಕ್ರಮ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡುವ ಜೊತೆಗೆ ಉತ್ತಮ ಅಂಕಗಳನ್ನು ಪಡೆದು‌ ಟಾಪ್ 5 ಜಿಲ್ಲೆಗಳಲ್ಲಿ ಬರುವಂರಾಗಬೇಕು ಎಂದು ಕಿವಿಮಾತು ಹೇಳಿದರು. ಎಸ್ಎಸ್ಎಲ್ಸಿ ಜೀವನದ ಪ್ರಮುಖ ಘಟ್ಟ ಭವಿಷ್ಯದಲ್ಲಿ ಯಾವುದೇ ಕೆಳ ದರ್ಜೆಯ ಹುದ್ದೆ ಪಡೆಯಬೇಕಾದ್ರೂ ಎಸ್ಎಸ್ಎಲ್ಸಿ ಫಲಿತಾಂಶ ನಿರ್ಣಾಯಕ ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯ ಸುಧಾರಣೆಗೆ ಉತ್ತಮ ಅಂಕ ಗಳಿಸಬೇಕು ಎಂದು ಸಲಹೆ ನೀಡಿದರು.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.