ರಾಯಚೂರು: ನಾಯಕ ಸಮುದಾಯಕ್ಕೆ ಡಿಸಿಎಂ ಸ್ಥಾನಮಾನ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್, ಸಿಎಂ ತಿರ್ಮಾನವಾಗಿರುತ್ತದೆ. ಒಮ್ಮೆ ಪಕ್ಷ ಏನು ತಿರ್ಮಾನ ಕೈಗೊಳ್ಳುತ್ತದೆ ಅದಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದ್ದಾರೆ.
ನಗರದ ಸಂಸದ ಕಚೇರಿಯಲ್ಲಿ ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಅವರು, ಹೈ-ಕ ಭಾಗಕ್ಕೆ ಮೂರು ಸಚಿವ ಸ್ಥಾನ ನೀಡಿಲ್ಲ. ಹಾಗಾಗಿ ಅಸಮಾಧಾನವಿದೆ. ಆದ್ರೆ ಪಕ್ಷ ಏನು ತಿರ್ಮಾನ ಕೈಗೊಳ್ಳಬೇಕು ಅದಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದ್ರು. ನಾಯಕ ಸಮುದಾಯಕ್ಕೆ, ಸಚಿವ ಶ್ರೀರಾಮುಲುರಿಗೆ ಡಿಸಿಎಂ ಹುದ್ದೆ ನೀಡದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಯಾದವರು ಒಂದು ಸಮುದಾಯಕ್ಕೆ ಸೀಮಿತವಾಗಿ ಮಾತನಾಡಬಾರದು. ಆದ್ರೂ ಆಯಾ ಸಮಯದಾಯಕ್ಕೆ ಸ್ಥಾನಮಾನಕ್ಕೆ ಅಭಿಲಾಷೆ ಇರುತ್ತೆ. ಹಾಗಂತ ಎಲ್ಲಾ ಸಮುದಾಯಕ್ಕೆ ಒಂದೊಂದು ಸ್ಥಾನ ಕೊಡುವುದಕ್ಕೆ ಆಗಲ್ಲ ಎಂದ್ರು.