ಆಕ್ಸಿಜನ್ ಸಮಸ್ಯೆಯಾಗದಂತೆ ಅಗತ್ಯ ಕ್ರಮ, ದಯಮಾಡಿ ಯಾರು ಹೊರಗಡೆ ಬರಬೇಡಿ : ಡಾ. ಶಿವರಾಜ್ ಪಾಟೀಲ್ ಮನವಿ - ರಿಮ್ಸ್ ಆಸ್ಪತ್ರೆ
ಕೊರೊನಾ ವಿರುದ್ಧ ನಾವೆಲ್ಲರೂ ಹೋರಾಟ ನಡೆಸುತ್ತಿದ್ದೇವೆ. ಹೀಗಾಗಿ, ಮನೆಯಿಂದ ಸಣ್ಣ ಸಣ್ಣ ವಿಷಯಕ್ಕೆ ಯಾರೂ ಕೂಡ ಹೊರಗಡೆ ಬರಬೇಡಿ. ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬೀಳಬಾರದು. ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಹೊರಗೆ ಬನ್ನಿ..
ರಾಯಚೂರು : ನಗರದಲ್ಲಿ ಆಕ್ಸಿಜನ್ ಸಮಸ್ಯೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.
ನಗರದ 17 ಖಾಸಗಿ, ಓಪೆಕ್ ಹಾಗೂ ರಿಮ್ಸ್ ಆಸ್ಪತ್ರೆ ಕೋವಿಡ್ ಆಸ್ಪತ್ರೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. 96 ವೆಂಟಿಲೇಟರ್ ಬೆಡ್‌ಗಳಿದ್ದು, 20 ಹೆಚ್‌ಎಫ್‌ಎನ್‌ಒ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈವರೆಗೆ ಯಾವುದೇ ಆಕ್ಸಿಜನ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿತರಿಗೆ ನೀಡುವ ರೆಮ್ಡಿಸಿವಿರ್ ಪೂರೈಕೆಯಲ್ಲಿ ಬೇರೆ ಜಿಲ್ಲೆಗಳಿಗಿಂತ ರಾಯಚೂರು ಉತ್ತಮವಾದ ಸ್ಥಿತಿಯಲ್ಲಿದೆ.
ಓದಿ:ಸಿಇಟಿ ಪರೀಕ್ಷೆ ಮುಂದೂಡಿಕೆ, ದಿನಾಂಕ ಮರು ನಿಗದಿ
ಕೊರೊನಾ ವಿರುದ್ಧ ನಾವೆಲ್ಲರೂ ಹೋರಾಟ ನಡೆಸುತ್ತಿದ್ದೇವೆ. ಹೀಗಾಗಿ, ಮನೆಯಿಂದ ಸಣ್ಣ ಸಣ್ಣ ವಿಷಯಕ್ಕೆ ಯಾರೂ ಕೂಡ ಹೊರಗಡೆ ಬರಬೇಡಿ. ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬೀಳಬಾರದು. ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಹೊರಗೆ ಬನ್ನಿ ಎಂದು ಮನವಿ ಮಾಡಿದ್ದಾರೆ.