ETV Bharat / state

ಮಸ್ಕಿ ತಾಪಂ; ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

author img

By

Published : Jul 6, 2020, 10:12 PM IST

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಪಂಚಾಯಿತಿಗೆ ಅಧ್ಯಕ್ಷರಾಗಿ ಶಿವಣ್ಣ ನಾಯಕ ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ಪಂಪನಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Musky Taluk Panchayat President-Vice President Unanimous Choice
ಮಸ್ಕಿ ತಾಲೂಕು ಪಂಚಾಯಿತಿ ಚುನಾವಣೆ..ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕು ಪಂಚಾಯಿತಿಗೆ ಅಧ್ಯಕ್ಷರಾಗಿ ಶಿವಣ್ಣ ನಾಯಕ ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ಪಂಪನಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಜಶೇಖರ ಡಂಬಳ ತಿಳಿಸಿದ್ದಾರೆ.

ಸೋಮವಾರ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಶಿವಣ್ಣ ನಾಯಕ, ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ಪಂಪನಗೌಡ ನಾಮಪತ್ರ ಸಲ್ಲಿಸಿದ್ದರು. ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. 14 ಸದಸ್ಯ ಸಂಖ್ಯಾಬಲದ ತಾಲೂಕು ಪಂಚಾಯಿತಿಯಲ್ಲಿ 6 ಜನ ಬಿಜೆಪಿ, 9 ಜನ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ 5 ಜನ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದರು.

ರೇಣುಕಾಗೆ ಒಲಿದ ಅದೃಷ್ಟ: ಈ ಪೈಕಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿಜಯಲಕ್ಷ್ಮಿ ಹಾಗೂ ಕಾಂಗ್ರೆಸ್​ನ ರೇಣುಕಾ ಪಂಪನಗೌಡ ಮಧ್ಯೆ ಪೈಪೋಟಿಯಿತ್ತು. ಬಿಜೆಪಿ ಕಚೇರಿಯಲ್ಲಿ ಚೀಟಿ ಎತ್ತಿದಾಗ ರೇಣುಕಾ ಅವರಿಗೆ ಅದೃಷ್ಟ ಒಲಿದು ಬಂದಿತ್ತು. ಕಾಂಗ್ರೆಸ್​ನ 4 ಸದಸ್ಯರು ಗೈರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.