ರಾಯಚೂರು: ಆಂಬ್ಯುಲೆನ್ಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ - baby born in ambulence at raichur
ಗುಂತಗೋಳ್ ಗ್ರಾಮದ ದ್ಯಾಮವ್ವಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು, ಈ ವೇಳೆ ಮಾರ್ಗ ಮದ್ಯದಲ್ಲಿಯೇ ಹೆರಿಗೆಯಾಗಿದೆ.

ಆಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ
ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಂತಗೋಳ್ ಗ್ರಾಮದ ಗರ್ಭೀಣಿ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆ ಆಂಬ್ಯುಲೆನ್ಸ್ ಸಿಬ್ಬಂದಿ ವಾಹನದಲ್ಲೇ ಹೆರಿಗೆ ಮಾಡಿಸಿ ತಾಯಿ -ಮಗುವಿನ ಜೀವ ಉಳಿಸಿದ್ದಾರೆ.
ಗುಂತಗೋಳ್ ಗ್ರಾಮದ ದ್ಯಾಮವ್ವಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು, ಈ ವೇಳೆ ಅಸಹಜ ನೋವಿನಿಂದಾಗಿ ಮಾರ್ಗ ಮದ್ಯದಲ್ಲಿಯೇ ಹೆರಿಗೆಯಾಗಿದೆ.
108 ಆರೋಗ್ಯ ಕವಚದ ಚಾಲಕ ರಾಜಸಾಬ್ ಸಹಾಯದಿಂದ ಶುಶ್ರೂಷಕ ಸುಖದೇವ್ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದು, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.