ರಾಯಚೂರು: ಮಾದಿಗ ಜಾಗೃತಿ ಸಮಾವೇಶ ನಿಮಿತ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಸಖತ್ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದರು.
ಸಮಾವೇಶದ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ಸರ್ಕಲ್ನಿಂದ ರಂಗಮಂದಿರದವರೆಗೆ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಸಮುದಾಯದ ಮುಖಂಡರು ಸೇರಿದಂತೆ ಶಾಸಕ ಶಿವರಾಜ್ ಪಾಟೀಲ್ ಹೆಜ್ಜೆ ಹಾಕಿ ಸಖತ್ ಡ್ಯಾನ್ಸ್ ಮಾಡಿದರು.
ಸದಾಶಿವ ವರದಿಯನ್ನು ನಾವೇ ಅನುಷ್ಠಾನ ಮಾಡಿಕೊಳ್ಳುತ್ತೇವೆ : ಆರ್.ಬಿ.ತಿಮ್ಮಾಪೂರ
ಹಿಂದುಳಿದ ವರ್ಗಗಳಲ್ಲಿ ಮಾದಿಗ ಸಮುದಾಯದ ಶಯೋಭಿವೃದ್ದಿಗಾಗಿ ರಾಜಕೀಯ ಪಕ್ಷಗಳು ಅವಕಾಶ ಕಲ್ಪಿಸಿದಲ್ಲಿ ಸದಾಶಿವ ವರದಿಯನ್ನು ನಾವೇ ಅನುಷ್ಠಾನ ಮಾಡಿಕೊಳ್ಳುತ್ತೇವೆ ಎಂದು ಮಾದಿಗ ಮಹಾ ಸಭಾದ ರಾಜಾಧ್ಯಕ್ಷ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ಹಾಗೂ ತಾಲೂಕು ಮಾದಿಗ ಮಹಾಸಭಾದಿಂದ ತಾಲೂಕು ಮಾದಿಗ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಮಾದಿಗ ಸಮುದಾಯ ರಾಜಕೀಯವಾಗಿ ಬಲಿಷ್ಠವಾದಲ್ಲಿ ಮಾತ್ರ ನಾವೇ ಸದೃಢವಾಗಬಹುದು. ನಮಗೆ ಕುರಿ, ಕೊಳಿ, ಹಸು ಸಾಕಾಣಿಕೆಗೆ ಸಾಲ ಬೇಡ ರಾಜಕೀಯವಾಗಿ ಬೆಳೆಯಲು ಅವಕಾಶ ಕಲ್ಪಿಸಿ. ನಮ್ಮ ಮತದಿಂದ ಇಂದು ನೀವು ಅಧಿಕಾರ ನಡೆಸುವುದಾದರೆ, ನಮ್ಮವರು ಯಾಕೆ ಶಾಸಕರಾಗಬಾರದು. ರಾಜಕೀಯವಾಗಿ ಬಳಸಿಕೊಳ್ಳುವುದು ನಿಲ್ಲಿಸಿ ನಮಗೆ ಒಂದು ಅವಕಾಶ ಕಲ್ಪಿಸುವ ಪಕ್ಷಕ್ಕೆ ನಮ್ಮ ಬೆಂಬಲವಿರಲಿದೆ ಎಂದರು.