ETV Bharat / state

ಉಸ್ಮಾನಿಯಾ ಮಾರುಕಟ್ಟೆಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ - Shivraj Patil visits Osmania Market

ಉಸ್ಮಾನಿಯಾ ಮಾರುಕಟ್ಟೆಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈ ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ಮನವಿ ಮಾಡಿದರು.

ML A Dr. Shivraj Patil visits
ಉಸ್ಮಾನಿಯಾ ಮಾರುಕಟ್ಟೆಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ..
author img

By

Published : Oct 13, 2020, 9:50 AM IST

ರಾಯಚೂರು: ತರಕಾರಿ ಮಾರುಕಟ್ಟೆಯಲ್ಲಿ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ವ್ಯಾಪಾರ ನಡೆಸುವಂತೆ ಇಲ್ಲಿನ ವ್ಯಾಪಾರಸ್ಥರಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಮನವಿ ಮಾಡಿದರು.‌

ಉಸ್ಮಾನಿಯಾ ಮಾರುಕಟ್ಟೆಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ

ಬಳಿಕ ಮಾತನಾಡಿದ ಅವರು, 'ಕೊರೊನಾ ಭೀತಿ‌ ಹಿನ್ನೆಲೆಯಲ್ಲಿ ರಾಯಚೂರು ನಗರದ ಉಸ್ಮಾನಿಯಾ ಮಾರುಕಟ್ಟೆಯನ್ನು ಬಂದ್‌ ಮಾಡಲಾಗಿತ್ತು. ಆದರೆ ಮಾರುಕಟ್ಟೆ ತೆರೆಯುವಂತೆ ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವಾಗ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌, ಮಾಸ್ಕ್ ಕಡ್ಡಾಯವಾಗಿ ಬಳಸಿ ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವ್ಯಾಪಾರಸ್ಥರು ಈ ನಿಯಮಗಳನ್ನು ಪಾಲಿಸಲಾಗುತ್ತಿದ್ದಾರೋ, ಇಲ್ಲವೋ ಎನ್ನುವುದರ ಬಗ್ಗೆ ನಿಗಾವಹಿಸಲು ಸಿಸಿ ಕ್ಯಾಮರಾ ಆಳವಡಿಕೆ ಮಾಡಲಾಗುವುದು. ನಿಯಮಗಳನ್ನು ಪಾಲಿಸದಿದ್ದರೆ ಪುನಃ ಮಾರುಕಟ್ಟೆ ಬಂದ್ ಆಗಲಿದೆ' ಎಂದು ಎಚ್ಚರಿಕೆ ನೀಡಿದರು.

ML A Dr. Shivraj Patil visits
ಉಸ್ಮಾನಿಯಾ ಮಾರುಕಟ್ಟೆಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ, ಪರಿಶೀಲನೆ

ಆರ್‌ಡಿಎ ಅಧ್ಯಕ್ಷ ಗೋಪಿಶೆಟ್ಟಿ, ಮಾರುಕಟ್ಟೆ ಮುಖಂಡ ಮಹಾವೀರ, ನಗರಸಭೆ ಸದಸ್ಯ ಶಶಿರಾಜ್, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ಹಾಗೂ ಇನ್ನಿತರರು ಶಾಸಕರಿಗೆ ಸಾಥ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.