ರಾಯಚೂರು: ನಗರದಲ್ಲಿ ವಿವಿಧ ವಾರ್ಡ್‌ಗಳ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಶಿವರಾಜ್ ಪಾಟೀಲ್ ಚಾಲನೆ ನೀಡಿದರು.
ನಗರದ ವಾರ್ಡ್ ನಂ.19,20,21 ರ ವ್ಯಾಪ್ತಿಯಲ್ಲಿ ಬರುವ ದೇವಿನಗರ, ಹರಿಜನವಾಡ ಸೇರಿದಂತೆ ನಾನಾ ಬಡಾವಣೆಗಳ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಚಾಲನೆ ನೀಡಿದರು. ಕೆಕೆಆರ್‌ಡಿಎಲ್, ಪಿಡಬ್ಲ್ಯೂಡಿ, ಕೆಎನ್‌ಎನ್‌ಎಲ್ ಇಲಾಖೆ 4.15 ಕೋಟಿ ರೂಪಾಯಿ ಮೊತ್ತದ ಸಿಸಿ ರೋಡ್, ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಗರದ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 65 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಯುಜಿಡಿ, ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಮುಗಿದ ಕಡೆಗಳಲ್ಲಿ ನಾನಾ ಕಡೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನುಳಿದ ಕಾಮಗಾರಿಗಳನ್ನು ಮುಗಿಸುವ ಮೂಲಕ ನಗರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.