ರಾಯಚೂರು: ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದಿ ನಿಗಮದದಿಂದ ಕೃಷಿ ಚಟುವಟಿಕೆ ಯೋಗ್ಯವಲ್ಲದ ಭೂಮಿಯನ್ನು ನೀಡಲಾಗಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ. ನಿಗಮದ ವ್ಯವಸ್ಥಾಪಕ ವೈ.ಎ.ಕಾಳೆ ಸೇರಿದಂತೆ 6 ಜನರ ವಿರುದ್ದ 420, 409 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಕೃಷಿ ಮಾಡಿಕೊಂಡು ಜೀವನ ಸಾಗಿಸಲು ಭೂ ಒಡೆತನ ಯೋಜನೆಯಡಿ ಭೂಮಿ ನೀಡುತ್ತಾರೆ. ಈ ಯೋಜನೆಯಡಿ ಫಲಾನುಭವಿಗೆ ಮಾನ್ವಿ ತಾಲೂಕಿನ ಮಲ್ಲಿಗೆ ಮಡಗು ಗ್ರಾಮದ ಸೀಮಾಂತರದ ಸರ್ವೇ ನಂ. 28ರ ಫಲಾವತ್ತದ ಭೂಮಿಯನ್ನ ನೀಡುವುದಾಗಿ ಹೇಳಿ, ಬಳಿಕ ಫಲಾನುಭವಿಗೆ ಭೂಮಿಯನ್ನ ಹಂಚಿಕೆ ಮಾಡುವ ಸಂಗಾಪುರ ಗ್ರಾಮದಲ್ಲಿ ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನ ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ರಿಜಿಸ್ಟರ್ ಮಾಡಿಸುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ತಪ್ಪಿಸ್ಥ ಅಧಿಕಾರಿಗಳು ವಿರುದ್ದ ಪ್ರಕರಣ ದಾಖಲಾಗಿದ್ದು, ಅನ್ಯಾಯಕ್ಕೆ ಒಳಗಾಗಿರುವ ಫಲಾನುಭವಿಗಳಿಗೆ ಯೋಗ್ಯ ಭೂಮಿ ನೀಡಬೇಕೆಂದು ಎಂದು ರೈತ ಸಂಘದ ಮುಖಂಡ ಚಾಮರಸ ಮಾಲೀಪಾಟೀಲ್ ಒತ್ತಾಯಿಸಿದ್ದಾರೆ.