ETV Bharat / state

ತೆಲಂಗಾಣ, ಆಂಧ್ರದಿಂದ ಭತ್ತ ಖರೀದಿ ನಿಲ್ಲಿಸುವಂತೆ ಡಿಸಿಎಂ ಸೂಚನೆ - ಕರೊನಾ ಲೆಟೆಸ್ಟ್ ನ್ಯೂಸ್​

ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿರುತ್ತಿರುವ ಹಿನ್ನೆಲೆ ಗಡಿ ಜಿಲ್ಲೆ ರಾಯಚೂರಲ್ಲೂ ಕಟ್ಟೆಚ್ಚರ ವಹಿಸಬೇಕಿದೆ ಅಂತ ಡಿಸಿಎಂ ಲಕ್ಷ್ಮಣ್ ಸವಧಿ ಹೇಳಿದ್ದಾರೆ. ಈ ಹಿನ್ನೆಲೆ ತೆಲಂಗಾಣ ಆಂಧ್ರದಿಂದ ಭತ್ತ ಖರೀದಿ ನಿಲ್ಲಿಸುವಂತೆ ಡಿಸಿಎಂ ಸೂಚಿಸಿದ್ದಾರೆ.

ತೆಲಂಗಾಣ, ಆಂಧ್ರದಿಂದ ಭತ್ತ ಖರೀದಿ ನಿಲ್ಲಿಸುವಂತೆ ಡಿಸಿಎಂ ಸೂಚನೆ
author img

By

Published : Apr 13, 2020, 5:37 PM IST

ರಾಯಚೂರು: ತೆಲಂಗಾಣ, ಆಂಧ್ರದಿಂದ ಭತ್ತ ಖರೀದಿಯನ್ನ ನಿಲ್ಲಿಸುವಂತೆ ರಾಯಚೂರು ಜಿಲ್ಲಾ ಉಸ್ತುವರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೊರೊನಾ ವೈರಸ್ ಕುರಿತಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳು ಕುರಿತಂತೆ ಸಭೆಯಲ್ಲಿ ಮಾತನಾಡಿದ್ದಾರೆ.

ತೆಲಂಗಾಣ, ಆಂಧ್ರದಲ್ಲಿ ಕೊರೊನಾ ಸೋಂಕು ಹರಡಿರುವ ಹಿನ್ನೆಲೆ ಗಡಿ ಜಿಲ್ಲೆ ರಾಯಚೂರಿಗೆ ಭತ್ತ ಮಾರಾಟ ಬರುತ್ತದೆ. ಆದ್ರೆ ಈಗ ಆಂಧ್ರ, ತೆಲಂಗಾಣದಲ್ಲಿ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಭತ್ತ ಖರೀದಿಯನ್ನ ನಿಲ್ಲಿಸಬೇಕು. ಜನರ ಓಡಾಟ ನಡೆಸದಂತೆ ನೋಡಿಕೊಳ್ಳಬೇಕು ಜತೆಗೆ ಗಡಿ ಭಾಗದಲ್ಲಿ ಬರುವ ಹಳ್ಳಿಗಳಲ್ಲಿ ಜನರು ಒಳಗೆ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತೆಲಂಗಾಣ, ಆಂಧ್ರದಿಂದ ಭತ್ತ ಖರೀದಿ ನಿಲ್ಲಿಸುವಂತೆ ಡಿಸಿಎಂ ಸೂಚನೆ

ಇನ್ನೂ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ನಡೆಯುತ್ತಿದೆ. ಇದನ್ನ ಕೂಡಲೇ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅಕ್ರಮ ಮದ್ಯ ಮಾರಾಟ ವಿಷಯವನ್ನ ಪ್ರಸ್ತಾಪಿಸಿದ ಉಪಮುಖ್ಯಮಂತ್ರಿಗಳು ಅಬಕಾರಿ ಅಧಿಕಾರಿಗಳು ಮಾರಾಟಗಾರರ ಮಧ್ಯ ಒಳ ಒಪ್ಪಂದವಿದೆ. ಇದಕ್ಕಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುತ್ತದೆ. ಇದನ್ನೆಲ್ಲ ಬಿಟ್ಟು ಕೂಡಲೇ ಅಕ್ರಮ ಮದ್ಯ, ಸೇಂದಿ, ಸಿ.ಎಚ್.ಪೌಂಡರ್ ಹಾಗೂ ಕಳ್ಳಭಟ್ಟಿ ಮಾರಾಟ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ನಿರ್ದಾಕ್ಷಿಣ್ಯವಾಗಿ ತಾವು ಕಾನೂನಾತ್ಮಕ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.