ETV Bharat / state

ಮಂಡಳಿ ಅಧ್ಯಕ್ಷ ಸ್ಥಾನವನ್ನು 15 ದಿನಗಳ ಬಳಿಕ ಸ್ವೀಕರಿಸುತ್ತೇನೆ: ಶಾಸಕ ಶಿವರಾಜ್ ಪಾಟೀಲ್ - ಶಾಸಕ ಡಾ.ಶಿವರಾಜ್ ಪಾಟೀಲ್

ಕೊರೊನಾ ಪಾಸಿಟಿವ್ ಬಂದಿರುವ ಕಾರಣದಿಂದ 15 ದಿನಗಳ ಕಾಲ‌ ಹೋಮ್ ಐಸೋಲೇಷನ್​​ಗೆ ಒಳಪಟ್ಟಿದ್ದೇನೆ. ಇದೀಗ ಸೋಂಕಿನಿಂದ ಗುಣಮುಖವಾಗಿದ್ದು, 15 ದಿನಗಳ ಬಳಿಕ ದಿನಾಂಕವನ್ನ ನಿಗದಿ ಮಾಡಿ ಅಧಿಕಾರ ಸ್ವೀಕರಿಸುತ್ತೇನೆ ಎಂದು ಶಾಸಕ ಶಿವರಾಜ್​ ಪಾಟೀಲ್​ ಹೇಳಿದ್ದಾರೆ.

chairmanship of the board after 15 days MLA Shivraj Patil
ಮಂಡಳಿ ಅಧ್ಯಕ್ಷ ಸ್ಥಾನವನ್ನು 15 ದಿನಗಳ ಬಳಿಕ ಸ್ವೀಕರಿಸುತ್ತೇನೆ: ಶಾಸಕ ಡಾ.ಶಿವರಾಜ್ ಪಾಟೀಲ್
author img

By

Published : Aug 28, 2020, 12:43 PM IST

ರಾಯಚೂರು: ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗಿದ್ದು, 15 ದಿನಗಳ ಬಳಿಕ ಅಧಿಕಾರ ಸ್ವೀಕರಿಸುವುದಾಗಿ ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿದ್ದಾರೆ.

ಮಂಡಳಿ ಅಧ್ಯಕ್ಷ ಸ್ಥಾನವನ್ನು 15 ದಿನಗಳ ಬಳಿಕ ಸ್ವೀಕರಿಸುತ್ತೇನೆ: ಶಾಸಕ ಡಾ. ಶಿವರಾಜ್ ಪಾಟೀಲ್

ನಗರದ ಶಾಸಕರ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕೊರೊನಾ ಪಾಸಿಟಿವ್ ಬಂದಿರುವ ಕಾರಣದಿಂದ 15 ದಿನಗಳ ಕಾಲ‌ ಹೋಮ್ ಐಸೋಲೇಷನ್​​ಗೆ ಒಳಪಟ್ಟಿದ್ದೇನೆ. ಇದೀಗ ಸೋಂಕಿನಿಂದ ಗುಣಮುಖವಾಗಿದ್ದು, 15 ದಿನಗಳ ಬಳಿಕ ದಿನಾಂಕವನ್ನ ನಿಗದಿ ಮಾಡಿ ಅಧಿಕಾರ ಸ್ವೀಕರಿಸುತ್ತೇನೆ ಎಂದರು.

ಡಾ. ಶಿವರಾಜ್ ಪಾಟೀಲ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಕ ಡಾ. ಶಿವರಾಜ್ ಪಾಟೀಲ್ ಅವರನ್ನು ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಅಧ್ಯಕ್ಷ ಸ್ಥಾನ ಬೇಡ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಬರುವ ದಿನಗಳಲ್ಲಿ ಅಧಿಕಾರ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

ರಾಯಚೂರು ನಗರದ ಹದಗೆಟ್ಟಿರುವ ರಸ್ತೆ ಕುರಿತು ಪ್ರಶ್ನಿಸಿದಾಗ, ನಗರದ ಎಲ್ಲಾ ರಸ್ತೆಗಳ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ದೊರೆತಿದೆ. ಕೊರೊನಾ ಹಾಗೂ ಮಳೆ ಇರುವ ಕಾರಣದಿಂದ ಕಾಮಗಾರಿಗೆ ಚಾಲನೆ ನೀಡಿಲ್ಲ. ಈಗಾಗಲೇ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗೆ ಬೇಕಾಗುವಂತಹ 95 ಕೋಟಿ ರೂಪಾಯಿ ಅನುದಾನ ಮಂಜೂರು ದೊರೆತಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.