ಮೈಸೂರು: ಮೂರು ತಿಂಗಳ ಮಗುವಿನ ತಾಯಿಯ ಶವ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಹುಣಸೂರಿನ ನರಸಿಂಹಸ್ವಾಮಿ ಬಡಾವಣೆಯ ರಶ್ಮಿ (24) ಮೃತರು. ಇವರು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸುಣ್ಣದ ಬೀದಿಯ ನಿವಾಸಿಗಳಾದ ಮಾರಿಮುತ್ತು ಮತ್ತು ಪದ್ಮಮ್ಮ ಎಂಬುವವರ ಪುತ್ರಿ.
ಕಳೆದ ಐದು ವರ್ಷಗಳ ಹಿಂದೆ ಹುಣಸೂರಿನ ನರಸಿಂಹಸ್ವಾಮಿ ಬಡಾವಣೆಯ ಜಗದೀಶ್ಗೆ ರಶ್ಮಿ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ 3 ವರ್ಷದ ಹೆಣ್ಣು ಮಗು, 3 ತಿಂಗಳ ಗಂಡು ಮಗುವಿದೆ. "ಜಗದೀಶ್ ನಮ್ಮ ಮಗಳಿಗೆ ಆಗಾಗ್ಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡ್ತಿದ್ದ. ಹಲವು ಬಾರಿ ಹಣ, ಚಿನ್ನ ಎಲ್ಲವನ್ನೂ ಕೊಟ್ಟರೂ ಕಿರುಕುಳ ಕೊಡುತ್ತಿದ್ದ" ಎಂದು ಪೋಷಕರು ತಿಳಿಸಿದ್ದಾರೆ.
ಇದನ್ನೂ ಓದಿ: ಮಳೆಗೆ ಬಿದ್ದ ಮನೆ, ಶೌಚಾಲಯದಲ್ಲೇ ಮಹಿಳೆಯ ವಾಸ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ
ಅಷ್ಟೇ ಅಲ್ಲ, ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಿ ಜಗದೀಶ್ಗೆ ಬುದ್ಧಿ ಹೇಳಲಾಗಿತ್ತು. ಇದೀಗ ವರದಕ್ಷಿಣೆಗಾಗಿ ಮಗಳನ್ನು ಸಾಯಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.