ETV Bharat / state

ಸುತ್ತೂರು ಜಾತ್ರೆ: ದಾಸೋಹಕ್ಕೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ

ನಾಳೆಯಿಂದ ಪ್ರಾರಂಭಗೊಂಡು 6 ದಿನಗಳ ಕಾಲ ನೆರವೇರುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆರೂ ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ನಡೆಯಲಿವೆ.

Sutthuru Shree Inaugurated Dasoha
ಸುತ್ತೂರಿನಲ್ಲಿ ದಾಸೋಹಕ್ಕೆ ಚಾಲನೆ ನೀಡಿದ ಸುತ್ತೂರು ಶ್ರೀ
author img

By

Published : Jan 17, 2023, 1:28 PM IST

ಮೈಸೂರು: ಹತ್ತೂರಲ್ಲಿ ಪ್ರಸಿದ್ಧಿ ಪಡೆದಿರುವ ಸುತ್ತೂರು ಜಾತ್ರೆಗೆ ಇನ್ನೊಂದು ದಿನ ಬಾಕಿ ಇದ್ದು, ಶ್ರೀ ಶಿವರಾತ್ರೇಶ್ವರರ ಗದ್ದಿಗೆಗೆ ಪೂಜೆ ಹಾಗೂ ದಾಸೋಹ ಭವನದಲ್ಲಿ ಪೂಜೆ ಮಾಡುವ ಮುಖಾಂತರ ಸುತ್ತೂರು ಶ್ರೀಗಳು ದಾಸೋಹಕ್ಕೆ ಚಾಲನೆ ನೀಡಿದರು. ನಾಳೆ‌‌ಯಿಂದ (ಜ.18) 23ರ ವರೆಗೆ ಅದ್ಧೂರಿಯಾಗಿ ಸುತ್ತೂರು ಜಾತ್ರೆ ನಡೆಯಲಿದ್ದು, ಹೊಸಮಠದ ಚಿದಾನಂದಸ್ವಾಮಿ ಹಾಗೂ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾಲನೆ ನೀಡುವರು. ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಸಮಾಜ ಸೇವಕರು, ಕೊಡುಗೈ ದಾನಿಗಳು, ವಿಜ್ಞಾನಿಗಳು, ಸಂಶೋಧಕರು ಹೀಗೆ ಎಲ್ಲ ಸ್ತರದ ಜನರು ಭಾಗವಹಿಸಲಿದ್ದಾರೆ.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದೊಂದಿಗೆ ನಾಳೆ ಸಂಜೆ 4ಕ್ಕೆ ವಸ್ತು ಪ್ರದರ್ಶನ, ಕೃಷಿ, ಸಿರಿಧಾನ್ಯ ಮತ್ತು ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಂಗೋಲಿ, ಸೋಬಾನೆ ಪದ, ದೋಣಿ ವಿಹಾರಗಳ ಉದ್ಘಾಟನೆ ನಡೆಯಲಿದೆ. ಜ.19ರಂದು ಸಾಮೂಹಿಕ ವಿವಾಹ, ಹಾಲ್ಹರವಿ ಉತ್ಸವ, 20ರಂದು ರಥೋತ್ಸವ, 21ರಂದು ಶ್ರೀ ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷ ದೀಪೋತ್ಸವ, 22 ರಂದು ತೆಪ್ಪೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳ ಜೊತೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ.

ನಿತ್ಯ ಎರಡು ಲಕ್ಷ ಮಂದಿಗೆ ದಾಸೋಹ: ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ನಿತ್ಯ ಎರಡೂವರೆ ಲಕ್ಷ ಮಂದಿಗೆ ದಿನದಲ್ಲಿ ಮೂರು ಬಾರಿ ಅನ್ನ ದಾಸೋಹವಿರಲಿದೆ. ಇದಕ್ಕಾಗಿ ಈಗಾಗಲೇ ಎರಡು ವರ್ಷ ಹಳೆಯ ಸಾವಿರ ಕ್ವಿಂಟಾಲ್ ಅಕ್ಕಿ ದಾಸ್ತಾನು ಮಾಡಲಾಗಿದೆ. 200 ಕ್ವಿಂಟಾಲ್ ಬೇಳೆ, 20 ರಿಂದ 25 ಕ್ವಿಂಟಾಲ್ ಬೆಲ್ಲ, 1,500 ಟಿನ್ ಎಣ್ಣೆ ಮೊದಲಾದವನ್ನು ದಾಸ್ತಾನು ಮಾಡಲಾಗಿದೆ. ಕರ್ನಾಟಕ ಮತ್ತು ಹೊರ ರಾಜ್ಯದಿಂದ 20 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಒಂದು ಸಾವಿರ ಅಡುಗೆ ಬಾಣಸಿಗರು ಹಾಗೂ ಅಡುಗೆ ಬಡಿಸಲು 5000 ಸಾವಿರಕ್ಕೂ ಅಧಿಕ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.

ಸಾಮೂಹಿಕ ವಿವಾಹ ಮಹೋತ್ಸವ: ಜ.19ರಂದು ಸಾಮೂಹಿಕ ವಿವಾಹ ಮಹೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರಾಮದಾಸ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ವುಪ್ಪು ಈಶ್ವರ್‌ರಾವ್, ತಿರುಮಲೈ ತಂಬು ಹಾಗೂ ಭಾರತೀ ರೆಡ್ಡಿ ಭಾಗವಹಿಸಲಿದ್ದಾರೆ. ಜ. 20ರಂದು ರಥೋತ್ಸವಕ್ಕೆ ಕೇಂದ್ರ ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್ ಜೋಷಿ ಚಾಲನ ನೀಡಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ದೇಶಿ ಆಟಗಳು ಮತ್ತು ಚಿತ್ರಕಲಾ ಸ್ಪರ್ಧೆಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಚಾಲನೆ ಸಿಗಲಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ದಿನೇಶ್ ಗುಂಡೂರಾವ್ ಜತೆಗಿರುವರು.

ಜ.21ರಂದು ಸಿರಿಧಾನ್ಯಗಳ ಮಹತ್ವ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಕೇರಳ ಕೃಷಿ ಸಚಿವ ಪಿ.ಪ್ರಸಾದ್, ಆರ್‌ಎಸ್‌ಎಸ್‌ನ ಸಹ ಕಾರ್ಯವಾಹಕ ಸಿ.ಆರ್.ಮುಕುಂದ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ಇರಲಿದ್ದಾರೆ. ಜ. 22ರಂದು ಭಜನಾ ಮೇಳ ಸಮಾರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌, ದೇಸಿ ಆಟಗಳ ಸಮಾರೋಪದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳುವರು.

ಜ.23ರಂದು ಕೃಷಿ ಮೇಳ ಮತ್ತು ವಸ್ತು ಪ್ರದರ್ಶನ ನಡೆಯಲಿದೆ. 350 ಕೃಷಿ ಮಳಿಗೆಗಳ ಪ್ರದರ್ಶನ ಇರಲಿದೆ. ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿ, ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮಿ ದಿವ್ಯ ಸಾನಿದ್ಯವಹಿಸಲಿದ್ದಾರೆ. ಸಮಾರೋಪದ ಭಾಷಣವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಲಿದ್ದಾರೆ. ಸಂಸದ ಸದಾನಂದ ಗೌಡ ಇನ್ನಿತರರು ಉಪಸ್ಥಿತರಿರಲಿದ್ದಾರೆ.

ಈ ನಡುವೆ ಜಾತ್ರೆಯ ಪ್ರಮುಖ ಆಕರ್ಷಣೆಯಾದ ವಸ್ತು ಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ. ಜೆಎಸ್‌ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳಿರುತ್ತವೆ. ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತು ಪ್ರದರ್ಶನ ಇರಲಿವೆ.

ದನಗಳ ಪರಿಷೆ ರದ್ದು: ದನಗಳ ಜಾತೆಯನ್ನು ಕಳೆದ 52 ವರ್ಷಗಳಿಂದಲೂ ಏರ್ಪಡಿಸಲಾಗುತ್ತಿದೆ. ಉತ್ತಮ ರಾಸುಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಆದರೆ ಈ ವರ್ಷ ಜಾನುವಾರುಗಳಲ್ಲಿ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವ ಕಾರಣ ಜಿಲ್ಲಾಧಿಕಾರಿಗಳ ಆದೇಶದಂತೆ ದನಗಳ ಜಾತ್ರೆಯನ್ನು ರದ್ದುಪಡಿಸಲಾಗಿದೆ.

ಇದನ್ನೂ ಓದಿ: ಒಮಿಕ್ರಾನ್‌ ಮುನ್ನೆಚ್ಚರಿಕೆ: ಸುತ್ತೂರು ಜಾತ್ರೆ ಸರಳ, ಸಂಪ್ರದಾಯಕ್ಕೆ ಸೀಮಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.