ETV Bharat / state

ಜಾಮೀನು ಕೊಡಿಸಲು ಹೈಕೋರ್ಟ್ ಜಸ್ಟಿಸ್​ ಹೆಸರು ದುರ್ಬಳಕೆ ಆರೋಪ: ಮಹಿಳಾ ನ್ಯಾಯವಾದಿ ವಿರುದ್ಧ ಎಫ್ಐಆರ್ - FIR AGAINST LADY LAWYER

ಜಾಮೀನು ಕೊಡಿಸಲು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯ ಹೆಸರು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಮಹಿಳಾ ನ್ಯಾಯವಾದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

FIR AGAINST LADY LAWYER
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : 12 hours ago

ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿಸುವ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಮಹಿಳಾ ನ್ಯಾಯವಾದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಹೈಕೋರ್ಟ್​​​​​ ನ ಕಾನೂನು ವಿಭಾಗದ ಜಂಟಿ ರಿಜಿಸ್ಟ್ರರ್ ಎಂ.ರಾಜೇಶ್ವರಿ ಎಂಬವರು ನೀಡಿದ ದೂರಿನ ಮೇರೆಗೆ ವಕೀಲೆ ದಯೀನಾ ಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) 318 (4) ವಂಚನೆಯಡಿ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ನ್ಯಾಯವಾದಿಯು, ತಮ್ಮ ಕಕ್ಷಿದಾರರೊಬ್ಬರಿಗೆ ಜಾಮೀನು ಕೊಡಿಸಲು ಹೈಕೋರ್ಟ್​​ ನ್ಯಾಯಮೂರ್ತಿಯೊಬ್ಬರು 50 ಲಕ್ಷ ರೂ. ಹಣ ನಿರೀಕ್ಷಿಸುತ್ತಿದ್ದಾರೆ. ಈ ಹಣವನ್ನು ನೀಡದಿದ್ದರೆ ಜಾಮೀನು ಪ್ರಕ್ರಿಯೆಯನ್ನ ಬೇರೊಬ್ಬ ವಕೀಲರಿಂದ ಮಾಡಿಸಿಕೊಳ್ಳಿ ಎಂದು ದಯೀನಾ ಭಾನು ಹೇಳಿರುವ ಬಗ್ಗೆ ಎಫ್ಐಆರ್​​ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಎಫ್ಐಆರ್​​ ವಿವರ: ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ 24 ವರ್ಷದ ವಿಷ್ಣುದೇವನ್ ಜಾಮೀನು ಸಿಗದೇ ಮೂರು ವರ್ಷಗಳಿಂದ ಜೈಲಿನಲ್ಲಿದ್ದ. ಮಗನನ್ನು ಜಾಮೀನಿನ ಮೇಲೆ ಬಿಡಿಸುವ ಕುರಿತಂತೆ ತಾಯಿಯು ಮಹಿಳಾ ನ್ಯಾಯವಾದಿ ಮರೀನಾ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ ವಾದ ಮಂಡಿಸಲು ಕೇಳಿಕೊಂಡಿದ್ದರು‌. ಇದಕ್ಕೆ ಪ್ರತಿಯಾಗಿ ಮರೀನಾ 10 ಲಕ್ಷ ರೂ. ಹಣ ಪಡೆದಿದ್ದರು. ಆರೋಪಿಗೆ ಜಾಮೀನು ಕೊಡಿಸಲು ಮಹಿಳಾ ನ್ಯಾಯವಾದಿ ವಿಫಲವಾದ ಬಳಿಕ ತಾಯಿ ಥೆರೆಸಾ, ತಾವು ನೀಡಿದ ಹಣ ವಾಪಸ್ ನೀಡುವಂತೆ ಕೇಳಿಕೊಂಡಿದ್ದರು. ಆಗ ವಕೀಲೆ 9 ಲಕ್ಷ ರೂ. ಮೊತ್ತದ 3 ಚೆಕ್ ಮಾತ್ರ ನೀಡಿದ್ದರು. ಆದರೆ ಹಣ ಹಿಂದಿರುಗಿಸಲಿರಲಿಲ್ಲ ಎಂದು ಎಫ್ಐಆರ್​​ನಲ್ಲಿ ಆರೋಪಿಸಲಾಗಿದೆ.

ತಾವು ನೀಡಿದ ಹಣ ವಾಪಸ್ ನೀಡುವಂತೆ ಮಹಿಳಾ ನ್ಯಾಯವಾದಿ ಬಳಿ ತಾಯಿ ಥೆರೆಸಾ ಕೇಳಿಕೊಂಡಾಗ ವಕೀಲೆ ಮರೀನಾ ಅವರು ಥೆರೆಸಾಗೆ ಆರತಿ ಎಂಬವರನ್ನು ಮರೀನಾ ಪರಿಚಯಿಸಿದ್ದರು‌. ಅವರು ತಮಗೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಪರಿಚಯವಿರುವುದಾಗಿ ಹೇಳಿ 72 ಸಾವಿರ ರೂ. ಪಡೆದಿದ್ದರು. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವೇಳೆ, ಮಹಿಳಾ ನ್ಯಾಯವಾದಿ ದಯೀನಾ ಭಾನು ಅವರು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು 50 ಲಕ್ಷ ರೂ. ಹಣವನ್ನು ಜಾಮೀನು ಕೊಡಿಸಲು ನಿರೀಕ್ಷಿಸುತ್ತಿದ್ದಾರೆ. ಹಣ ನೀಡಲು ಸಾಧ್ಯವಾಗದಿದ್ದರೆ ಜಾಮೀನು ಪಡೆಯಲು ಬೇರೊಬ್ಬ ವಕೀಲರನ್ನು ನೇಮಿಸಿಕೊಳ್ಳಿ ಎಂದು ಕಕ್ಷಿದಾರರಿಗೆ ತಿಳಿಸಿರುವ ಬಗ್ಗೆ ಎಫ್ಐರ್​​ನಲ್ಲಿ ಉಲ್ಲೇಖಿಸಲಾಗಿದೆ.

ಮಗನಿಗೆ ಜಾಮೀನು ಪಡೆಯಲು ಸಾಧ್ಯವಾಗದ ತಾಯಿ ಥೆರೆಸಾ ನ್ಯಾಯವಾದಿ ದಯೀನಾ ಬಾನು ಅವರು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಹೈಕೋರ್ಟ್ ಕಾನೂನು ವಿಭಾಗದ ಜಂಟಿ ರಿಜಿಸ್ಟ್ರರ್ ಅವರ ಗಮನಕ್ಕೆ ತಂದಿದ್ದರು. ಈ ಆರೋಪದ ಬಗ್ಗೆ ಪ್ರಾಥಮಿಕ ಪರಿಶೀಲನೆ ನಡೆಸಿದ ರಿಜಿಸ್ಟ್ರರ್ ಅವರು ಹೈಕೋರ್ಟ್ ನ್ಯಾಯಮೂರ್ತಿ ಹೆಸರನ್ನು ದುರ್ಬಳಕೆ ಆರೋಪದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಮಾಸ್ಕ್​, ಪಿಪಿಇ ಕಿಟ್​ ಖರೀದಿ ಹಗರಣ: ಕಂಪನಿಗಳ ವಿರುದ್ಧ ಆತುರದ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.