Zepto Delivers Skoda Kylaq: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬ್ಯುಸಿ ಶೆಡ್ಯುಲ್‌ನಿಂದಾಗಿ ಯಾವುದೇ ವಸ್ತುವನ್ನು ಖರೀದಿಸಲು ತಮ್ಮ ಮನೆಗಳಿಂದ ಹೊರಬರಲು ನೂರು ಬಾರಿ ಯೋಚಿಸುತ್ತಿದ್ದಾರೆ. ಇದು ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಲು ಕಾರಣವಾಗಿದೆ. ಹೀಗಾಗಿ ಮನೆಯಲ್ಲೇ ಕುಳಿತು ತಮ್ಮ ಫೋನ್‌ಗಳಿಂದ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದಾರೆ. ತಮ್ಮ ವಸ್ತುಗಳು ಕೂಡಲೇ ಡೆಲಿವರಿ ಆಗಬೇಕೆಂಬುದು ಅವರ ಬಯಕೆ.
ಈ ಸಾರ್ವಜನಿಕ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಬ್ಲಿಂಕಿಟ್ ಇತ್ತೀಚೆಗೆ ಹೊಸ ಸೇವೆ ಪ್ರಾರಂಭಿಸಿತ್ತು. ಇದರ ಮೂಲಕ ಆರ್ಡರ್ ಮಾಡಿದ ಕೇವಲ 10 ನಿಮಿಷಗಳಲ್ಲಿ ದಿನಸಿ ವಸ್ತುಗಳು ಗ್ರಾಹಕರನ್ನು ತಲುಪುತ್ತವೆ. ಬ್ಲಿಂಕಿಟ್ ನಂತರ ದಿನಸಿ, ಇತರ ಹಲವು ವಸ್ತುಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಆಂಬ್ಯುಲೆನ್ಸ್‌ನೊಂದಿಗೆ ತನ್ನ ಸೇವೆಯನ್ನು ವಿಸ್ತರಿಸಿತು.
ಜೆಪ್ಟೊ ಇತ್ತೀಚೆಗೆ ಆಸಕ್ತಿದಾಯಕ ವಿಡಿಯೋ ಹಂಚಿಕೊಂಡಿದೆ. ವಿಡಿಯೋದಲ್ಲಿ, ಆರ್ಡರ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಕಾರೊಂದನ್ನು ಜೆಪ್ಟೊ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿದ್ದನ್ನು ನೋಡಬಹುದು!. ಆರ್ಡರ್ ಮಾಡಿದ ಕೇವಲ ಹತ್ತು ನಿಮಿಷಗಳಲ್ಲೇ ಕಾರನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಬಹುದೇ? ಇದು ನಿಜವೇ?.
ರಶ್ಲೇನ್ ವರದಿಯ ಪ್ರಕಾರ, ಸ್ಕೋಡಾ ಕಂಪೆನಿ ಜೆಪ್ಟೊ ಜೊತೆ ಪಾಲುದಾರಿಕೆ ಹೊಂದಿದೆ. ಇದರೊಂದಿಗೆ ಅವರು ಕೇವಲ 10 ನಿಮಿಷಗಳಲ್ಲಿ ಕಾರನ್ನು ಗ್ರಾಹಕರ ಮನೆಗೆ ತಲುಪಿಸುವ ಸೇವೆ ಒದಗಿಸಿದ್ದಾರೆ. ಸ್ಕೋಡಾ ಆಟೋ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ 'ಕೈಲೋಕ್ ಎಸ್‌ಯುವಿ' ಎಂಬ ಹೊಸ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರಿನ ಬಗ್ಗೆ ಸ್ಕೋಡಾ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ, ಕಂಪೆನಿ ಕಾರನ್ನು ಬಿಡುಗಡೆ ಮಾಡುವುದರ ಮೇಲೆ ಮಾತ್ರವಲ್ಲದೆ ಸಾಧ್ಯವಾದಷ್ಟು ಬೇಗ ಡೆಲಿವರಿ ಮಾಡುವತ್ತಲೂ ಗಮನಹರಿಸಿದೆ. ಇದು ಭಾರತದ ಪ್ರಮುಖ ಕ್ವಿಕ್-ಕಾಮರ್ಸ್ ಕಂಪೆನಿಯಾದ ಜೆಪ್ಟೂ ಜೊತೆ ಪಾಲುದಾರಿಕೆ ಹೊಂದಿದೆ. ಹೀಗಾಗಿ, ಕಾರು ಖರೀದಿಸುವಲ್ಲಿ ತನ್ನ ಗ್ರಾಹಕರಿಗೆ ಹೊಸ ಅನುಭವವನ್ನು ಒದಗಿಸಲು ಕಂಪೆನಿ ಸಿದ್ಧವಾಗಿದೆ.
ಜೆಪ್ಟೋ ಮೂಲಕ ಕಾರು ಡೆಲಿವರಿ: ಜೆಪ್ಟೋ ತನ್ನ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಇದರ ಬಗ್ಗೆ ಟೀಸರ್ಬಿಡುಗಡೆ ಮಾಡಿದೆ. ಇದು ಹೊಸ ಕಾರು ಡೆಲಿವರಿ ಸರ್ವೀಸ್ ಬಗ್ಗೆ ಮಾಹಿತಿ ಒದಗಿಸಿದೆ. ಜೆಪ್ಟೊ ಬಿಡುಗಡೆ ಮಾಡಿದ ಟೀಸರ್ ಅನ್ನು ಸ್ಕೋಡಾ ಇಂಡಿಯಾ ಸಹಕಾರದಿಂದ ರಚಿಸಲಾಗಿದೆ. ಈ ಟೀಸರ್‌ನಲ್ಲಿ ಜೆಪ್ಟೋ ಡೆಲಿವರಿ ಬಾಯ್ ಸ್ಕೋಡಾ ಶೋ ರೂಂಗೆ ಹೋಗಿದ್ದಾರೆ. ಬಳಿಕ ಆರ್ಡರ್ ತೆಗೆದುಕೊಳ್ಳಲು ಬಂದಿದ್ದೇನೆ ಎಂದು ಹೇಳುತ್ತಾರೆ. ಶೋ ರೂಂ ಒಳಗೆ ತೆಗೆದುಕೊಂಡು ಹೋಗುವುದನ್ನು ನೀವು ಕಾಣಬಹುದು.
ಶೋ ರೂಂನಲ್ಲಿರುವ ಸ್ಕೋಡಾ ಅಧಿಕಾರಿ ತನ್ನ ಆರ್ಡರ್ ಅನ್ನು ಜೆಪ್ಟೊ ಡೆಲಿವರಿ ಬಾಯ್‌ಗೆ ತೋರಿಸುತ್ತಾರೆ. ಅವರು ತೋರಿಸಿದ ಆರ್ಡರ್ ಕಂಪೆನಿಯ ಹೊಸ ಸಬ್-ಕಾಂಪ್ಯಾಕ್ಟ್ SUV, ಸ್ಕೋಡಾ ಕಲೋಸ್ ಆಗಿತ್ತು. ಆದರೆ ಈ ಆ್ಯಡ್ ಮತ್ತೊಂದು ಕುತೂಹಲಕಾರಿ ವಿಷಯವೆಂದ್ರೆ, ಜೆಪ್ಟೂ ಡೆಲಿವರಿ ಬಾಯ್‌ಗೆ ತಾನು ಕಾರನ್ನು ಡೆಲಿವರಿ ಮಾಡಲು ಬಂದಿದ್ದೇನೆಂದು ತಿಳಿದಿರುವುದಿಲ್ಲ. ಕ್ರೇಜಿ ವಿಡಿಯೋದ ಕೊನೆಯಲ್ಲಿ ಅವರು 'ಸ್ಕೋಡಾ ಎಕ್ಸ್ ಜೆಪ್ಟೊ: ಕಮಿಂಗ್ ಸೂನ್' ಎಂದು ಬರೆದಿದ್ದಾರೆ. ಇದರರ್ಥ ಸ್ಕೋಡಾ ಮತ್ತು ಜೆಪ್ಟೊ ಜೊತೆಗಿನ ಪಾಲುದಾರಿಕೆಯಲ್ಲಿ ಶೀಘ್ರದಲ್ಲೇ ಹೊಸ ಸೇವೆಯನ್ನು ಪ್ರಾರಂಭಿಸಲಾಗುವುದು.
ಈ ವಿಡಿಯೋದ ಕ್ಯಾಪ್ಷನ್ನಲ್ಲಿ, ನಮ್ಮಲ್ಲಿ ಮಿಕ್ಸರ್, ಫೋನ್ ಮತ್ತು ಟ್ಯಾಬ್ಲೆಟ್ ಇದೆ. ಆದ್ರೆ ಈಗ, ಅಂದರೆ ಫೆಬ್ರವರಿ 8ರಿಂದ ನ್ಯೂ ಥಿಂಗ್ ಇಸ್ ಕಮಿಂಗ್ ಸೂನ್ ಎಂದು ಅವರು ಬರೆದಿದ್ದಾರೆ. ಆದರೆ ಈ ಕಮರ್ಶಿಯಲ್ ಆ್ಯಡ್ನಲ್ಲಿ ಈ ಕಾರನ್ನು ಜೆಪ್ಟೊ ಕೇವಲ 10 ನಿಮಿಷಗಳಲ್ಲಿ ತಲುಪಿಸುತ್ತದೆಯೇ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಯೇ ಎಂಬುದು ಇನ್ನೂ ದೃಢೀಕರಿಸಲಾಗಿಲ್ಲ.
ಈ ವಿಶೇಷ ಸೇವೆ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಕಾರುಗಳನ್ನು ಜನರ ಮನೆಗಳಿಗೆ ತಲುಪಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದಲ್ಲದೆ, ಆನ್‌ಲೈನ್‌ನಲ್ಲಿ ಕಾರನ್ನು ಆರ್ಡರ್ ಮಾಡಲು ಪಾವತಿ ಪ್ರಕ್ರಿಯೆ ಮತ್ತು ದಾಖಲೆಗಳ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿಯನ್ನು ಒದಗಿಸಲಾಗಿಲ್ಲ.
ಜೆಪ್ಟೋದಿಂದ ಕಾರ್ ಆರ್ಡರ್ ಮಾಡುವುದು ಹೇಗೆ?:
- ಬಳಕೆದಾರರು ಮೊದಲು ತಮ್ಮ ಫೋನ್‌ಗಳಲ್ಲಿ Zepto ಅಪ್ಲಿಕೇಶನ್ ಓಪನ್ ಮಾಡಬೇಕಾಗುತ್ತದೆ.
- ನಂತರ ಸ್ಕೋಡಾ ಕಲೋಸ್ ಟೆಸ್ಟ್ ಡ್ರೈವ್ ಆಯ್ಕೆ ಆರಿಸಿ.
- ಅದಾದ ನಂತರ ಕಾರು ಮಾರಾಟಕ್ಕೆ ಲಭ್ಯವಿದ್ದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಿಮ್ಮ ಮನೆಗೆ ತಲುಪಿಸಲಾಗುತ್ತದೆ.
- ನೀವು ಅದನ್ನು ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗಬಹುದು. ಇದರಿಂದ ನೀವು ಆ ಕಾರನ್ನು ಖರೀದಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಬಹುದು.
- ಆದರೂ ಆನ್‌ಲೈನ್ ಕಾಮರ್ಸ್ ಪ್ಲಾಟ್ಫಾರ್ಮ್ ಕಾರನ್ನು ಮಾರಾಟ ಮಾಡುತ್ತಿರುವುದು ಇದೇ ಮೊದಲಲ್ಲ. 2023ರಲ್ಲಿ ಅಮೆಜಾನ್ ಅಮೆರಿಕದಲ್ಲಿ ಕಾರುಗಳನ್ನು ಮಾರಾಟ ಮಾಡಲು ಹುಂಡೈ ಜೊತೆ ಪಾಲುದಾರಿಕೆ ಮಾಡಿಕೊಂಡಿತ್ತು.
ಇದನ್ನೂ ಓದಿ: ಸರ್ಕಾರಿ ಅಲರ್ಟ್ ಕಾಲರ್ ಟ್ಯೂನ್ನಿಂದ ಸಮಸ್ಯೆಯೇ? ಇದನ್ನು ಹೀಗೆ ತಪ್ಪಿಸಿ