ETV Bharat / state

ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ದೇಶದಲ್ಲಿರುವ ಹುಲಿಗಳ ನಿಖರ ಸಂಖ್ಯೆ ಬಹಿರಂಗ

ಹುಲಿ ಯೋಜನೆಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಹುಲಿ ಗಣತಿ ವರದಿ ಬಿಡುಗಡೆ ಮಾಡಿದರು. ದೇಶದಲ್ಲಿ ಈಗ 3167 ಹುಲಿಗಳಿವೆ ಎಂದು ಹುಲಿ ಗಣತಿ ವರದಿ ತಿಳಿಸಿದೆ.

tiger census data
ಹುಲಿ ಗಣತಿ ವರದಿ
author img

By

Published : Apr 9, 2023, 1:37 PM IST

Updated : Apr 9, 2023, 2:24 PM IST

ಮೈಸೂರು: ಹುಲಿ ಯೋಜನೆಯ ಸುವರ್ಣ ಮಹೋತ್ಸವ ಹಿನ್ನೆಲೆ ಇಲ್ಲಿನ ಕರಾಮುವಿ ಘಟಿಕೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿ ವರದಿಯನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಈ ಗಣತಿ ಪ್ರಕಾರ ದೇಶದಲ್ಲಿ 2022ರಲ್ಲಿ 3167 ಹುಲಿಗಳಿರುವುದು ಗೊತ್ತಾಗಿದೆ.

ವರದಿಯಲ್ಲಿದೆ ದೇಶದ ಹುಲಿಗಳ ಸಂಖ್ಯೆ.. ಮೈಸೂರಿನ ಕರಾಮುವಿ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದರು. ಈ ವರದಿಯಂತೆ ದೇಶದಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದು ಕಂಡು ಬರುತ್ತದೆ. ವರದಿ ಪ್ರಕಾರ 2022ರಲ್ಲಿ ದೇಶದಲ್ಲಿ 3167 ಹುಲಿಗಳು ಇವೆ. ಇನ್ನು 2006ರಲ್ಲಿ 1411, 2010 ರಲ್ಲಿ 1706, 2014 ರಲ್ಲಿ 2226, 2018ರಲ್ಲಿ 2967 ಹುಲಿಗಳ ಇದ್ದವು. ಕಳೆದ 10 ವರ್ಷಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ.75 ರಷ್ಟು ಏರಿಕೆಯಾಗಿದೆ.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಕಳೆದ 10 ವರ್ಷದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ.75 ರಷ್ಟು ಏರಿಕೆಯಾಗಿದೆ. 2022ರಲ್ಲಿ ದೇಶದಲ್ಲಿರುವ ಹುಲಿಗಳ ಸಂಕ್ಯೆ 3167ಕ್ಕೆ ಏರಿಕೆ ಆಗಿದೆ. ಹುಲಿ ಸಂತತಿ ಹೆಚ್ಚುತ್ತಿರುವುದು ಗೌರವದ ಕ್ಷಣ ಎಂದು ಮೋದಿ ತಿಳಿಸಿದರರು.

ಪುರಾತನ ಕಾಲದಿಂದ ಹುಲಿಗೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಹುಲಿಗಳು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಮಧ್ಯ ಭಾರತದ ಹಲವೆಡೆ ಪೂಜಿಸಲಾಗುತ್ತದೆ. ಭಾರತ ಜಗತ್ತಿನ ಅತಿ ದೊಡ್ಡ ಹುಲಿ ಮತ್ತು ಆನೆ ಸಂರಕ್ಷಣಾ ದೇಶವಾವಾಗಿದೆ. ಜೊತೆ 4 ವರ್ಷಗಳಲ್ಲಿ ಭಾರತದಲ್ಲಿ ಚಿರತೆಗಳ ಸಂತತಿ ಹೆಚ್ಚಿದೆ ಎಂದರು.

ಇದನ್ನೂ ಓದಿ: ಬಂಡೀಪುರ ಕಾಡಲ್ಲಿ ಒಂದೂವರೆ ತಾಸು ಪ್ರಧಾನಿ ಸಫಾರಿ

ಪ್ರಕೃತಿ ಮತ್ತು ವನ್ಯಜೀವಿಗಳ ರಕ್ಷಣೆಗೆ ಪ್ರಧಾನಿ ಕರೆ.. ನಿಸರ್ಗದ ಜೊತೆ ಬದುಕುವುದನ್ನು ಆದಿವಾಸಿ ಜನರನ್ನು ನೋಡಿ ನಮ್ಮ ಸಮಾಜ ಕಲಿಯಬೇಕಿದೆ. ಪ್ರಕೃತಿಯಿಂದ ಪಡೆದಿರುವುದನ್ನು ಮರಳಿ ನೀಡಬೇಕಿದೆ. ಆದ್ದರಿಂದ ಪ್ರಕೃತಿ ಮತ್ತು ವನ್ಯಜೀವಿ ರಕ್ಷಣೆಗೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಮೋದಿ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್, ಕೇಂದ್ರದ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಉಪಸ್ಥಿತರಿದ್ದರು.

ಅವನತಿಯತ್ತ ಸಾಗಿದ್ದ ಹುಲಿ ಸಂತತಿಯನ್ನು ಉಳಿಸಲೇಬೇಕೆಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1973 ರಲ್ಲಿ ಹುಲಿ ರಕ್ಷಿತಾರಣ್ಯಗಳನ್ನು ಘೋಷಣೆ ಮಾಡಿ ಹುಲಿ ಯೋಜನೆ ಆರಂಭಿಸಿದ್ದರು. ಅಂದು ಘೋಷಣೆಯಾದ ಹುಲಿ ರಕ್ಷಿತ ಅರಣ್ಯಗಳಲ್ಲಿ ಬಂಡೀಪುರವೂ ಒಂದಾಗಿದೆ. ಈಗ ಯೋಜನೆ ಸುವರ್ಣ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಬಂಡೀಪುರಕ್ಕೆ ಭೇಟಿ ನೀಡಿ, ಸಫಾರಿಯನ್ನು ಕೂಡ ಇಂದು ನಡೆಸಿದರು.

ಇದನ್ನೂ ಓದಿ: 'ಆಸ್ಕರ್' ಬೊಮ್ಮ - ಬೆಳ್ಳಿ ದಂಪತಿ ಭೇಟಿಯಾದ ಪ್ರಧಾನಿ ಮೋದಿ: ಬಂಡೀಪುರ, ತೆಪ್ಪಕಾಡು ಭೇಟಿ ಮುಕ್ತಾಯ

Last Updated : Apr 9, 2023, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.