ಮೈಸೂರು: ಲಾಕ್ಡೌನ್ ಸಡಿಲಿಕೆಯಲ್ಲಿ ಅಂತರ್ ಜಿಲ್ಲಾ ಸಂಚಾರಕ್ಕೂ ಅನುಮತಿ ನೀಡಿದ್ದರಿಂದ ರೈಲು ಮೂಲಕ ಖುಷಿಯಲ್ಲಿಯೇ ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದಾರೆ.
ಬೆಂಗಳೂರಿನಿಂದ ಬೆಳಿಗ್ಗೆ 9.20ಕ್ಕೆ ಹೊರಟ ರೈಲು ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿ ಮೂಲಕ ನಗರ ರೈಲ್ವೆ ನಿಲ್ದಾಣ ತಲುಪಿತು. ಬೆಂಗಳೂರಿನಿಂದ ಬಂದ 63 ಮಂದಿ ಪ್ರಯಾಣಿಕರನ್ನು ರೈಲ್ವೆ ಸಿಬ್ಬಂದಿ ಸ್ವಾಗತಿಸಿದಾಗ ಅಭಿಪ್ರಾಯ ಹಂಚಿಕೊಂಡರು. ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಒಂದೇ ಮಾರ್ಗದಲ್ಲಿ ಹೊರಗೆ ಹೋಗುವ ವ್ಯವಸ್ಥೆ ಮಾಡಲಾಗಿತ್ತು.