ETV Bharat / state

ಕಾರ್ಮಿಕರನ್ನು ಬೀದಿಗೆ ತಳ್ಳಿದ ಕಂಪನಿ ವ್ಯವಸ್ಥಾಪಕರು.. ರಸ್ತೆಯಲ್ಲೇ ವಾಗ್ವಾದ.. - nanjangud sugar issue updates

ಇಂದು ವಾಸವಿದ್ದ ಕಾರ್ಮಿಕರಿಗೆ ಶೆಡ್‌ಗಳನ್ನು ಖಾಲಿ ಮಾಡುವಂತೆ ಕಾರ್ಖಾನೆಯ ವ್ಯವಸ್ಥಾಪಕರು ಒತ್ತಾಯಿಸಿ ಅವರಿಗೆ ಊಟ ನೀಡದೆ ಕಾರ್ಖಾನೆಯಿಂದ ಹೊರ ಹಾಕಿದರು. ಇದನ್ನು ಪ್ರತಿಭಟಿಸಿ ಕಾರ್ಖಾನೆಯ ಮುಂದೆ ವ್ಯವಸ್ಥಾಪಕರೊಂದಿಗೆ ಮಾತಿನ ಚಕಮಕಿ ನಡೆಯಿತು.

NANJANGUD_FACTORY_LABOURS_PROTEST_
ಕಾರ್ಮಿಕರನ್ನು ಬೀದಿಗೆ ತಳ್ಳಿದ ಕಂಪೆನಿ ವ್ಯವಸ್ಥಾಪಕರು
author img

By

Published : May 13, 2020, 8:24 PM IST

ಮೈಸೂರು : ಲಾಕ್​​ಡೌನ್ ಹಿನ್ನೆಲೆ ಕಾರ್ಮಿಕರಿಗೆ ಆಶ್ರಯ ಮತ್ತು ಊಟ ನೀಡದೆ ಅವರನ್ನು ಹೊರ ಹಾಕಿದ ಘಟನೆ ನಂಜನಗೂಡಿನ ಕೈಗಾರಿಕಾ ಪ್ರದೇಶದ ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆಯಲ್ಲಿ ನಡೆದಿದ್ದು, ಇದನ್ನು ವಿರೋಧಿಸಿ ಕಾರ್ಮಿಕರು ವ್ಯವಸ್ಥಾಪಕರೊಂದಿಗೆ ವಾಗ್ವಾದ ನಡೆಸಿದರು.

ಕಾರ್ಮಿಕರನ್ನು ಬೀದಿಗೆ ತಳ್ಳಿದ ಕಂಪನಿ ವ್ಯವಸ್ಥಾಪಕರು..
ಜಿಲ್ಲೆಯ ನಂಜನಗೂಡು ತಾಲೂಕು ಕೊರೊನಾ ಹಾಟ್​​ಸ್ಪಾಟ್ ಆಗಿದೆ. ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳು ಬಹುತೇಕ ಬಂದ್ ಆಗಿವೆ. ಮಲ್ಲುಪುರ ಬಳಿ ಇರುವ ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆಗೆ ಹೊರ ರಾಜ್ಯದಿಂದ ಕಟ್ಟಡ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರು ಲಾಕ್​​​ಡೌನ್​​ನಲ್ಲಿ ಸಿಲುಕಿದೆ. ತಮ್ಮನ್ನು ಊರಿಗೆ ಕಳುಹಿಸಿ ಕೊಡುವಂತೆ ಕಳೆದ ವಾರ ತಹಶೀಲ್ದಾರರ ಕಚೇರಿಗೆ ಬಂದು ಮನವಿ ಮಾಡಿಕೊಂಡಿದ್ರು. ತಹಶೀಲ್ದಾರರು ಅಧಿಕಾರಿಗಳೊಂದಿಗೆ ಮಾತನಾಡಿ ಚರ್ಚಿಸಿ ನಿಮ್ಮ ಊರುಗಳಿಗೆ ಕಳುಹಿಸುವಂತೆ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಭರವಸೆ ನಂತರ ಕಾರ್ಮಿಕರು ಕಾರ್ಖಾನೆಯಲ್ಲೆ ಇದ್ದರು.
ಆದರೆ, ಇಂದು ವಾಸವಿದ್ದ ಕಾರ್ಮಿಕರಿಗೆ ಶೆಡ್‌ಗಳನ್ನು ಖಾಲಿ ಮಾಡುವಂತೆ ಕಾರ್ಖಾನೆಯ ವ್ಯವಸ್ಥಾಪಕರು ಒತ್ತಾಯಿಸಿ ಅವರಿಗೆ ಊಟ ನೀಡದೆ ಕಾರ್ಖಾನೆಯಿಂದ ಹೊರ ಹಾಕಿದರು. ಇದನ್ನು ಪ್ರತಿಭಟಿಸಿ ಕಾರ್ಖಾನೆಯ ಮುಂದೆ ವ್ಯವಸ್ಥಾಪಕರೊಂದಿಗೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು ಸಮಾಧಾನ ಪಡಿಸಿದ್ರು. ಉತ್ತರ ಭಾರತದ ಕಾರ್ಮಿಕರು ತಮ್ಮನ್ನು ಊರಿಗೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದಾರೆ, ನಾಳೆ ಈ‌ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.