ಮೈಸೂರು: ಜಿಲ್ಲೆಯಲ್ಲಿಂದು 149 ಮಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1073ಕ್ಕೆ ಏರಿಕೆಯಾಗಿದೆ.

ಇಂದು ಸೋಂಕಿನಿಂದ ಗುಣಮುಖರಾಗಿ 27 ಮಂದಿ ಡಿಸ್ಚಾಜ್೯ ಆಗಿದ್ದಾರೆ. 5 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
625 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 1073 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 75 ಮಂದಿ ಕೊರೊನಾದಿಂದ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.