ಮೈಸೂರು: ಯುವತಿ ಹೇಳಿಕೆ ಆಧಾರದ ಮೇಲೆ ಕೂಡಲೇ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂತ್ರಸ್ತ ಯುವತಿ ಪರ ಪ್ರತಿಪಕ್ಷ ನಿಲ್ಲುತ್ತೆ. ಕಾಂಗ್ರೆಸ್ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಮಾಡಲಿದೆ ಎಂದರು. ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ನಿರಾಕರಣೆ ವಿಚಾರವಾಗಿ ಮಾತನಾಡಿ, ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಒಪ್ಪಿದ್ದಾರೆ. ಸಮರ್ಥ ಅಭ್ಯರ್ಥಿ ಕಣಕ್ಕಿಳಿಸುವ ಸಲುವಾಗಿ ಸತೀಶ್ ಅವರನ್ನ ಕಣಕ್ಕಿಳಿಸಲಾಗಿದೆ. ಸಿಡಿ ಪ್ರಕರಣ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಯಾವುದೇ ಪರಿಣಾಮ ಬೀರಲ್ಲ. ಉಪಚುನಾವಣೆಯಲ್ಲಿ ಸಿಡಿ ಪ್ರಕರಣ ಸಮಸ್ಯೆಯೇ ಆಗಲ್ಲ. ರಮೇಶ್ ಜಾರಕಿಹೊಳಿ ಕಣಕ್ಕಿಳಿದಿಲ್ಲವುಲ್ಲ. ಸ್ಥಳೀಯ ವಿಚಾರಗಳು, ಬಿಜೆಪಿ ದುರಾಡಳಿತ ಚರ್ಚೆಗೆ ಬರಲಿದೆ ಎಂದರು.
ಏಕಪತ್ನಿ ವ್ರತಸ್ಥ ಎಂಬ ಸಚಿವ ಡಾ. ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಚಿವ ಸುಧಾಕರ್ ಕೂಡಲೇ ರಾಜೀನಾಮೆ ಕೊಡಬೇಕು. ತಾವು ಆ ರೀತಿ ಇದ್ರೆ ಉಳಿದವರೆಲ್ಲಾ ಹಾಗೇ ಇರ್ತಾರಾ? ಯಾವುದೋ ಭಯದಲ್ಲಿ ಸಚಿವರಾದವರು ಕೆಲಸ ಮಾಡಲು ಆಗಲ್ಲ. ಸರ್ಕಾರದ ಒಂದು ಭಾಗವಾಗಿ ಸಚಿವರು ಕೆಲಸ ಮಾಡ್ತಾರೆ. ಹೀಗಾಗಿ ಭಯದಲ್ಲಿ ಸ್ಟೇ ತಂದಿದ್ದಾರೆ. ಕೂಡಲೇ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.