ಮೈಸೂರು : ಆನೆ ತುಳಿತದಿಂದ ಸಾವನ್ನಪ್ಪಿದ ಮೃತ ಮಾವುತನ ಕುಟುಂಬಕ್ಕೆ ಮೃಗಾಲಯದ ವತಿಯಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲಾಯಿತು.
ನಿನ್ನೆ ರಾತ್ರಿ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆ ಮಾವುತನಾಗಿ ಕಾರ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ನೌಕರ ಹರೀಶ್ ಎಂಬುವರ ಮೇಲೆ ಆನೆ ಆಕಸ್ಮಿಕವಾಗಿ ದಾಳಿ ನಡೆಸಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹರೀಶ್ ಕುಟುಂಬಕ್ಕೆ ಮೃಗಾಲಯದ ವತಿಯಿಂದ ₹10 ಲಕ್ಷ ಪರಿಹಾರ ನೀಡಲಾಯಿತು.
ಇಂದು ಬೆಳಗ್ಗೆ ಮೃತನ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮೃತನ ಪತ್ನಿಗೆ ಗುತ್ತಿಗೆ ನೌಕರಿಯನ್ನು ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.