ETV Bharat / state

ಸಿಎಂ ಬಿಎಸ್​ವೈ ಸರ್ಕಾರ​​ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದೆ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ - ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ನೀರಾವರಿ ಇಲಾಖೆ ಸಿಎಂ ಬಳಿಯೇ ಇದ್ದು, 21,700 ಕೋಟಿ ರೂ. ಕಾನೂನು ಪಾಲನೆ ಮಾಡದೆ ಟೆಂಡರ್ ಕರೆದಿರುವ ಬಗ್ಗೆ ಆರೋಪಿಸಿದ್ದಾರೆ. ಇದರಲ್ಲಿ ಶೇ.10%ರಷ್ಟು ಅಂದ್ರೇ ಕೇಂದ್ರ ಸರ್ಕಾರ ₹2,100 ಕೋಟಿ ಕಮಿಷನ್ ಪಡೆದಿದೆ. ಈ ಬಗ್ಗೆ ಇಡಿ ಹಾಗೂ ಹೈಕೋರ್ಟ್ ಮೊರೆ ಹೋಗಿ ನಾವು ತನಿಖೆ ಮಾಡುವಂತೆ ಒತ್ತಾಹಿಸುತ್ತೇವೆ..

Mysore
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
author img

By

Published : Jun 18, 2021, 2:25 PM IST

ಮೈಸೂರು : ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಬ್ರೈನ್​ ಡೆಡ್​​ ಸರ್ಕಾರವಿದ್ದು, ಕೆಲವು ಅಂಗಾಂಗಗಳು ವೆಂಟಿಲೇಟರ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಆ ವೆಂಟಿಲೇಟರ್​​ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ರಾಜ್ಯದ ಮರ್ಯಾದೆಯನ್ನ ಬಿಜೆಪಿ ಶಾಸಕರು ಹರಾಜು ಹಾಕುತ್ತಿದ್ದಾರೆ. ಈಗಲಾದರೂ ಸರ್ಕಾರ ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ‌ನೀಡಲಿ ಎಂದು ಆಗ್ರಹಿಸಿದರು.

ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ

ನೀರಾವರಿ ಇಲಾಖೆಯಲ್ಲಿ ಟೆಂಡರ್ ಅಕ್ರಮ ನಡೆದ ಬಗ್ಗೆ ಸ್ವತಃ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪ ಮಾಡಿದ್ದಾರೆ. ನೀರಾವರಿ ಇಲಾಖೆ ಸಿಎಂ ಬಳಿಯೇ ಇದ್ದು, 21,700 ಕೋಟಿ ರೂ. ಕಾನೂನು ಪಾಲನೆ ಮಾಡದೆ ಟೆಂಡರ್ ಕರೆದಿರುವ ಬಗ್ಗೆ ಆರೋಪಿಸಿದ್ದಾರೆ. ಇದರಲ್ಲಿ ಶೇ.10%ರಷ್ಟು ಅಂದ್ರೇ ಕೇಂದ್ರ ಸರ್ಕಾರ ₹2,100 ಕೋಟಿ ಕಮಿಷನ್ ಪಡೆದಿದೆ. ಈ ಬಗ್ಗೆ ಇಡಿ ಹಾಗೂ ಹೈಕೋರ್ಟ್ ಮೊರೆ ಹೋಗಿ ನಾವು ತನಿಖೆ ಮಾಡುವಂತೆ ಒತ್ತಾಹಿಸುತ್ತೇವೆ ಎಂದರು.

15 ದಿನಗಳಿಂದ ಸಂಸದ ಪ್ರತಾಪ್‌ ಸಿಂಹ ಅವರು ಜಾಲತಾಣಗಳನ್ನು ಬಂದ್ ಮಾಡಿಕೊಂಡು ಐಎಎಸ್ ಅಧಿಕಾರಿಗಳನ್ನು ಓಡಿಸಿ ನಾಪತ್ತೆಯಾಗಿದ್ದಾರೆ. ಕೋವಿಡ್ ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗಿದೆ. ಈಗ ಕೋವಿಡ್ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಅಲ್ಲಿಯೂ ಸಹ ವಂಚನೆಯಾಗುತ್ತಿದೆ ಎಂದು ಆರೋಪಿಸಿದರು.

ಮುಡಾದಿಂದ ಸರ್ವೇ ನಂ. 4ರಲ್ಲಿ ವಾಸವಿರುವ ವ್ಯಕ್ತಿಗಳಿಗೆ ಖಾತೆ ಮಾಡಿಕೊಡಿ ಎಂದು ಹೈಕೋರ್ಟ್ ಹೇಳಿದೆ. ಅದರ ನಡುವೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಹೋಗಲು 40 ಲಕ್ಷ ರೂ. ಹಣವನ್ನು ವಕೀಲರಿಗೆ ಮುಡಾದಿಂದ ನೀಡಲಾಗಿದೆ. ಆ ₹40 ಲಕ್ಷ ಹಣವನ್ನು ವಾಪಸ್ ವಸೂಲಿ ಮಾಡಬೇಕು. ಜತೆಗೆ ಶಾಸಕ ಅರವಿಂದ್ ಬೆಲ್ಲದ್ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆ ಮಾಡಬೇಕೆಂದು ಆಗ್ರಹಿಸಿದರು.
ಓದಿ: ಪಕ್ಷದ ಕಚೇರಿಗೆ ಬೆಲ್ಲದ್ ದಿಢೀರ್​​ ಭೇಟಿ; ಅರುಣ್ ಸಿಂಗ್ ನಿರ್ಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.