ಮೈಸೂರು: ಮೈಸೂರು ಜಿಲ್ಲೆಗೆ ಮುಂದಿನ ವಿಧಾನಸಭಾ ಚುನಾವಣೆ ಬಳಕೆಗಾಗಿ ಬಂದಿರುವ ಇವಿಎಂ ಯಂತ್ರಗಳ ಬಗ್ಗೆ ಅನುಮಾನ ಇದೆ, ಕೂಡಲೇ ಈ ಅನುಮಾನವನ್ನ ಬಗೆಹರಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಕ್ತರಾ ಎಮ್ ಲಕ್ಷ್ಮಣ್ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಳಕೆ ಮಾಡಲು 5635 ಬ್ಯಾಲೆಟ್ ಯೂನಿಟ್ ಹಾಗೂ 3,958 ಕಂಟ್ರೋಲ್ ಯೂನಿಟ್ಗಳನ್ನು ತರಲಾಗಿದೆ.
ಇವುಗಳಲ್ಲಿ ಎಲ್ಲ ಇವಿಎಂಗಳು ಹೊಸದಾಗಿದ್ದು, ಇದು ಅನುಮಾನಕ್ಕೆ ಕಾರಣವಾಗಿದೆ ಇವುಗಳನ್ನೂ ನಿರ್ವಹಣೆ ಮಾಡಲು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು ಇವಿಎಂಗಳ ಬಗ್ಗೆ ಅನುಮಾನ ಉಂಟಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಎಲ್ಲ ಯಂತ್ರಗಳನ್ನು ಮರುಪರಿಶೀಲನೆ ಮಾಡಬೇಕೆಂದು ಅವರು ಆಗ್ರಹಿಸಿದರು.
ನಂತರ ಮಾತನಾಡಿದ ಅವರು ಬಿಜೆಪಿಯಲ್ಲಿ ಒಟ್ಟು 47ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳ ಶಾಸಕರು ಮತ್ತು 3 ಜನ ಸಂಸದರು ಇದ್ದಾರೆ, 16 ಮಂದಿ ಸಂಸದರು ಹಾಗೂ ಸಚಿವರ ವಿರುದ್ಧ ಸುದ್ಧಿ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಬೆಂಗಳೂರಿನ ರೌಡಿ ಶೀಟರ್ ಸೈಲೆಂಟ್ ಸುನಿಲ್ ಪೊಲೀಸರಿಗೆ ಸಿಗುತ್ತಿಲ್ಲ ಆದರೆ ಬಿಜೆಪಿ ಯವರಿಗೆ ಸಿಗುತ್ತಿದ್ದಾರೆ. ಈತನ ಮೇಲೆ 17 ಗಂಭೀರ ಪ್ರಕರಣಗಳಿವೆ, ಈತ ಬಿಜೆಪಿ ಮುಖಂಡರ ಜೊತೆ ವೇದಿಕೆ ಹಂಚಿಕೊಂಡಿದ್ದು, ಇದು ಬಿಜೆಪಿ ಸಂಸ್ಕೃತಿ ಯನ್ನು ತೋರುತ್ತದೆ ಎಂದರು.
ಇದನ್ನೂ ಓದಿ:ಮೈಸೂರು: ಹಾಸ್ಟೆಲ್ನಲ್ಲಿ ನೇಣಿಗೆ ಶರಣಾದ ಪಿಯು ವಿದ್ಯಾರ್ಥಿ