ಇದೇ ತಿಂಗಳ 17 ರಿಂದ ಮೂರು ದಿನಗಳ ಕಾಲ ಟಿ.ನರಸೀಪುರದ ತಿರುಮಲಕೂಡಿನಲ್ಲಿ ನಡೆಯಲಿರುವ 11ನೇ ಕುಂಭಮೇಳಕ್ಕೆ ಸೇನೆ ನಿರ್ಮಿಸಿರುವ ತೇಲುವ ಸೇತುವೆ ಗುಂಜನರಸಿಂಹಸ್ವಾಮಿ ದೇವಲಯ ಭಾಗದಿಂದ ನದಿಯ ಮಧ್ಯಭಾಗದಲ್ಲಿ ನಿರ್ಮಾಣವಾಗಿರುವ ಸಭಾ ಮಂಟಪ ಸೇರಿದಂತೆ ಇತರ ವೇದಿಕೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಅಗಸ್ತ್ಯತ್ವೇಶ್ವರ ದೇವಲಯಕ್ಕೂ, ಸಂಗಮದ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನ ಮಾಡಲು ಭಕ್ತರಿಗೆ ಸೇತುವೆಯಿಂದ ಅನುಕೂಲವಾಗಿದೆ.
ಭಾರತೀಯ ಸೇನೆಯ 140 ಮಂದಿ ಯೋಧರು 160 ಮೀಟರ್ ಉದ್ದದ 3 ಮೀಟರ್ ಅಗಲದ ಈ ತೇಲುವ ಸೇತುವೆಯನ್ನ 3 ದಿನ ಹಗಲು ರಾತ್ರಿ ಕೆಲಸ ಮಾಡಿ ನಿರ್ಮಿಸಿದ್ದಾರೆ.