ETV Bharat / state

ಫಿಲ್ಮ್​ ಸಿಟಿಗೆ ಬೆಂಗಳೂರಿಗಿಂತ ಮೈಸೂರು ಹೆಚ್ಚು ಸೂಕ್ತ: ನಾದಬ್ರಹ್ಮ ಹಂಸಲೇಖ - ದಸರಾ ಉದ್ಘಾಟಕ

ಬೆಂಗಳೂರಿಗಿಂತ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮೈಸೂರು ಸೂಕ್ತವಾಗಿದೆ ಎಂದು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಹೇಳಿದರು.

Hamsalekha
ನಾದಬ್ರಹ್ಮ ಹಂಸಲೇಖ
author img

By ETV Bharat Karnataka Team

Published : Sep 12, 2023, 4:30 PM IST

ಫಿಲ್ಮ್​ ಸಿಟಿಗೆ ಬೆಂಗಳೂರಿಗಿಂತ ಮೈಸೂರು ಹೆಚ್ಚು ಸೂಕ್ತ: ನಾದಬ್ರಹ್ಮ ಹಂಸಲೇಖ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫಿಲ್ಮ್ ಸಿಟಿಗೆ ಬೇಕಾದ ಎಲ್ಲಾ ರೀತಿಯ ವಾತಾವರಣ ಇದೆ. ಬೆಂಗಳೂರಿಗಿಂತ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮೈಸೂರು ಸೂಕ್ತವಾಗಿದೆ ಎಂದು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ. ಇಂದು ನಗರದ ಪತ್ರಕರ್ತರ ಭವನದಲ್ಲಿ, ಮಾಧ್ಯಮದವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಫಿಲ್ಮ್​ ಸಿಟಿ ನಿರ್ಮಾಣವಾದರೆ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಾಂಸ್ಕೃತಿಕ ರಾಜಧಾನಿಯಾದ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹೆಚ್ಚು ಸೂಕ್ತವಾಗಿದೆ. ಬೆಂಗಳೂರು ಈಗ ತುಂಬಾ ಬೆಳೆದುಹೋಗಿದೆ. ಅಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕಿಂತ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹೆಚ್ಚು ಸೂಕ್ತವಾಗಿದೆ. ಇಲ್ಲಿ ಸುತ್ತಮುತ್ತಲೂ ಪ್ರಾಕೃತಿಕ ಸೌಂದರ್ಯ ಜೊತೆಗೆ ಪಾರಂಪರಿಕ ಸೌಂದರ್ಯವೂ ಸಹ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಸಹ ಮೈಸೂರಿನಲ್ಲಿ ಹೆಚ್ಚಾಗಿರುವುದರಿಂದ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಇದು ಸೂಕ್ತ ಸ್ಥಳ ಎಂದು ಹೇಳಿದರು.

ದಸರಾ ಉದ್ಘಾಟಕರಾಗಿ ನೇಮಿಸಿರುವುದು ಸಂತಸ ತಂದಿದೆ.. ದಸರಾ ಆಚರಣೆ ಪ್ರತಿಕ್ರಿಯಿಸಿದ ಹಂಸಲೇಖ, ನನ್ನನ್ನು ಈ ಬಾರಿಯ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ್ದಾರೆ. ಇದು ನನ್ನ ಭಾಗ್ಯ. ಕಳೆದ ಬಾರಿ ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡಿದ್ದರು‌. ನನ್ನನ್ನು ದಸರಾ ಉದ್ಘಾಟನೆಗೆ ಎಂದು ಕರೆದಿದ್ದಾರೆ. ಇದು ನನಗೆ ತುಂಬಾ ಸಂತೋಷ ಕೊಟ್ಟಿದೆ ಎಂದರು. ಬಳಿಕ ಮಹಿಷಾ ದಸರಾ ವಿಚಾರವಾಗಿ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಇದನ್ನೂ ಓದಿ: 14 ದಸರಾ ಗಜಪಡೆಗೆ ವಿಮೆ; ಸೆಪ್ಟೆಂಬರ್ 1ರಿಂದ ಆಕ್ಟೋಬರ್ ಅಂತ್ಯದವರೆಗೆ ವಿಮೆ ಅವಧಿ

ಸ್ಮಾರ್ಟ್ ಸಿಟಿ ಅಲ್ಲ, ಸ್ಮಾರ್ಟ್ ವಿಲೇಜ್.. ಎಲ್ಲಿ ನೋಡಿದರೂ ಸ್ಮಾರ್ಟ್ ಸಿಟಿ ಮಾಡಬೇಕು ಎಂಬ ವಿಚಾರವೇ ಹರಿದಾಡುತ್ತಿದೆ. ಆದರೆ ನಿಜವಾಗಿಯೂ ಆಗಬೇಕಾಗಿರುವುದು ಸ್ಮಾರ್ಟ್ ಸಿಟಿ ಅಲ್ಲ, ಸ್ಮಾರ್ಟ್ ವಿಲೇಜ್. ಹಳ್ಳಿಯಲ್ಲಿ ರೈತರಿಗೆ ಎಲ್ಲಾ ತರಹದ ಸೌಲಭ್ಯಗಳು ಸಿಗಬೇಕು. ರಸ್ತೆ ಮಾರ್ಗ ಕಲ್ಪಿಸಬೇಕು. ಜೊತೆಗೆ ರೈತರು ಬೆಳೆದ ಬೆಳೆಯಿಂದಲೇ ಜನರು ಜೀವನ ಸಾಗುತ್ತಿರುವುದು ಎಂದು ಹೇಳಿದರು.

ಬರದ ನಡುವೆ ಅದ್ದೂರಿ ದಸರಾ ಆಚರಣೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಮೊದಲು ರೈತರ ವಿಚಾರವನ್ನು ಗಮನಿಸಬೇಕು. ಹಬ್ಬದ ಮೂಲವೇ ರೈತ. ಅದರ ಬಗ್ಗೆ ನನ್ನ ಚಿಂತೆ ಹೆಚ್ಚು ಇದೆ. ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆಯಾಗಿದೆ. ರೈತರ ಮನಸ್ಸಿಗೆ ನೋವಾಗುವ ದುಂದುವೆಚ್ಚ ಬೇಡ ಎನ್ನುವುದು ನನ್ನ ಭಾವನೆ ಎಂದರು

ಹಿಂದಿ ಏರಿಕೆಯ ಹುನ್ನಾರ ಹಿಂದಿನಿಂದಲೂ ಇದೆ.. ನನಗೆ ಕನ್ನಡ ಒಂದಂಶ ಆಗಬೇಕು. ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಗಬೇಕು. ಕನ್ನಡವನ್ನು ರಕ್ಷಣೆ ಮಾಡಬೇಕು. ಹಿಂದಿ ಭಾಷೆಯ ಹೇರಿಕೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಜವಾಹರಲಾಲ್​ ಕಾಲದಿಂದಲೂ ದಕ್ಷಿಣದ ಮೇಲೆ ಹಿಂದಿಯ ಹೇರಿಕೆ ಆಗುತ್ತಿದೆ. ಈಗ ಅದು ಇನ್ನೂ ಹೆಚ್ಚಾಗಿದೆ. ಹಿಂದಿ ರಾಷ್ಟ್ರೀಯ ಭಾಷೆ ಮಾಡಬೇಕೆನ್ನುವ ಮಾತುಗಳು ಕೇಳಿಬರುತ್ತಿವೆ. ದೆಹಲಿಗೆ ಕನ್ನಡ ಬೇಕಿಲ್ಲ, ಆದರೆ ನಮಗೆ ದೆಹಲಿ ಬೇಕಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: Karnataka Budget: ಮೈಸೂರಿನಲ್ಲಿ ಫಿಲ್ಮ್​ ಸಿಟಿ; ಕಲಬುರಗಿಯಲ್ಲಿ ಜಾನಪದ ಲೋಕ ಸ್ಥಾಪನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.