ETV Bharat / state

ಜಿಟಿಡಿ, ಸಂದೇಶ್ ನಾಗರಾಜ್​​​​ರನ್ನ ಪಕ್ಷದಿಂದ ಉಚ್ಚಾಟನೆ ಮಾಡಲೇಬೇಕು: ಜೆಡಿಎಸ್ ಮುಖಂಡರ ಆಗ್ರಹ - ಜೆಡಿಎಸ್ ಹೈಕಮಾಂಡ್‌ಗೆ ಸ್ಥಳೀಯ ನಾಯಕರು ಎಚ್ಚರಿಕೆ

ನಮ್ಮ ಪಕ್ಷದ ಬಗ್ಗೆ ಮಾತನಾಡುವ ಹಕ್ಕು ಜಿಟಿಡಿಗೆ ಇಲ್ಲ, ಅವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಆಮೇಲೆ ಮಾತನಾಡಲಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆಲ್ಲಲಿ ಗೊತ್ತಾಗುತ್ತೆ. ಪಕ್ಷದಿಂದ ಲಾಭ ಪಡೆದು ಈಗ ನಮ್ಮ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

jds party
ಜೆಡಿಎಸ್ ಮುಖಂಡರ ಆಗ್ರಹ
author img

By

Published : Feb 27, 2021, 5:18 PM IST

ಮೈಸೂರು : ಶಾಸಕ ಜಿ ಟಿ ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ್ ‌ನಾಗರಾಜ್ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಉಚ್ಛಾಟನೆ ಮಾಡಲಿಲ್ಲವೆಂದರೆ ಸಾಮೂಹಿಕವಾಗಿ ರಾಜೀನಾಮೆ ಕೊಡುತ್ತೇವೆ ಎಂದು ಜೆಡಿಎಸ್ ಹೈಕಮಾಂಡ್‌ಗೆ ಸ್ಥಳೀಯ ನಾಯಕರು ಎಚ್ಚರಿಸಿದ್ದಾರೆ.

ಜಿಟಿಡಿ-ಸಂದೇಶ ನಾಗರಾಜ್ ವಿರುದ್ಧ ಜೆಡಿಎಸ್ ಮುಖಂಡರ ಕಿಡಿ..

ಓದಿ: ಗಂಡುಮೆಟ್ಟಿದ ನೆಲದಲ್ಲಿ 'ರಾಬರ್ಟ್​​' ಪ್ರಿ-ರಿಲೀಸ್​ ಈವೆಂಟ್​...'ಡಿ ಬಾಸ್' ಆಗಮನಕ್ಕೆ ಹುಬ್ಬಳ್ಳಿಯಲ್ಲಿ ಭರದ ಸಿದ್ಧತೆ

ಮಾಧ್ಯಮಗಳೊಂದಿಗೆ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ ಮಾತನಾಡಿ, ಪಕ್ಷವನ್ನ ಹಾಳು ಮಾಡುತ್ತಿರುವ ಜಿ.ಟಿ ದೇವೇಗೌಡರನ್ನ ಪಕ್ಷದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಸ್ಥಳೀಯ ನಾಯಕರೆಲ್ಲರೂ ಸಾಮೂಹಿಕ ರಾಜೀನಾಮೆ ಕೊಡುತ್ತೇವೆ ಎಂದು ಜಿಟಿಡಿ ಉಚ್ಛಾಟನೆಗೆ ಒತ್ತಾಯಿಸಿದ್ದಾರೆ.

ನಮ್ಮ ಪಕ್ಷದ ಬಗ್ಗೆ ಮಾತನಾಡುವ ಹಕ್ಕು ಜಿಟಿಡಿಗೆ ಇಲ್ಲ, ಅವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಆಮೇಲೆ ಮಾತನಾಡಲಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆಲ್ಲಲಿ, ಗೊತ್ತಾಗುತ್ತೆ. ಪಕ್ಷದಿಂದ ಲಾಭ ಪಡೆದು ಈಗ ನಮ್ಮ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಜಿಟಿಡಿಗೆ ಪಕ್ಷದಲ್ಲಿ ಕುಮಾರಸ್ವಾಮಿ, ದೇವೇಗೌಡ್ರು ಎಷ್ಟೊಂದು ಸಹಾಯ ಮಾಡಿದ್ದಾರೆ. ಆದರೆ, ಅವರಿಗೆ ಮನುಷ್ಯತ್ವ ಇದ್ರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಕ್ರೋಶ ಹೊರ ಹಾಕಿದರು.

ಬಿಜೆಪಿ-ಜೆಡಿಎಸ್ ಮೈತ್ರಿಯಾಗುತ್ತೆ ಅನ್ನೋ ಮಾತುಗಳಿದ್ದವು. ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯುತ್ತೆ ಅನ್ನೋ ಬಗ್ಗೆ ಪಾಲಿಕೆ ಮೇಯರ್ ಚುನಾವಣೆ ಮುಂಚೆ ಚರ್ಚೆಗಳಾಗಿದ್ದವು. ಆದರೆ, ನಮ್ಮ ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತೇ ಅನ್ನೋದನ್ನೇ ಕಾಯುತ್ತಿದ್ದೆವು ಎಂದು ಹೇಳಿದರು.

ಜೆಡಿಎಸ್ ಮುಖಂಡ ಅಬ್ದುಲ್ ಅಜೀಜ್ ಮಾತನಾಡಿ, ಮೇಯರ್ ಚುನಾವಣೆಯಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದು, ಆರೀಫ್ ಹುಸೇನ್, ಅಯೂಬ್ ಖಾನ್ ಅವರು ಮೇಯರ್ ಚುನಾವಣೆಗೂ ಮುನ್ನ ಜೆಡಿಎಸ್ ಸದಸ್ಯರಿಗೆ ₹15 ಲಕ್ಷ ಆಫರ್ ಕೊಟ್ಟಿದ್ದರು. ಐವರು ಸದಸ್ಯರಿಗೆ ತಲಾ ₹15 ಲಕ್ಷ ಕೊಡುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದರು.

ಇದರ ಉಸ್ತುವಾರಿಯನ್ನು ಮಾಜಿ‌ ಮೇಯರ್ ಆಯೂಬ್ ಖಾನ್ ಮತ್ತು‌ ಪಾಲಿಕೆ ಸದಸ್ಯ ಆರೀಫ್ ಹುಸೇನ್ ವಹಿಸಿಕೊಂಡಿದ್ದರು. ನನ್ನ ಸಮ್ಮುಖದಲ್ಲೇ ಐವರು ಸದಸ್ಯರನ್ನ ಕರೆತರಲು ಆಫರ್ ಕೊಟ್ಟರು‌ ಎಂದು ಆರೋಪಿಸಿದರು.

ನಮ್ಮ ಜೆಡಿಎಸ್ ಪಕ್ಷದ ಇಬ್ಬರು ಮುಸ್ಲಿಮ್ ಕಾರ್ಪೊರೇಟರ್‌ಗಳನ್ನ ಬಲವಂತವಾಗಿ ಕೂಡಿ‌ ಹಾಕಿದ್ದರು. ಇದರ ಜೊತೆಗೆ 12 ಕಾರ್ಪೊರೇಟರ್‌ಗಳನ್ನ ಕರೆದುಕೊಂಡು ಬರಲು ನನಗೆ ಹೇಳಿದ್ದರು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಓಲೈಸಿಕೊಳ್ಳುವ ಸಲುವಾಗಿ ಡೀಲ್ ಅಂತಾ ಮಾತನಾಡುತ್ತಿದ್ದಾರೆ. ಮೊದಲು ಡೀಲ್ ಮಾಡಲು ಹೊರಟವರು ನೀವು, ನಾವಲ್ಲ. ನಮ್ಮ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ತಿರುಗೇಟು ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.