ETV Bharat / state

ಜೆಡಿಎಸ್​ನ ಮೊದಲ ಪಟ್ಟಿ.. ಇದು ಶಾಶ್ವತ ಪಟ್ಟಿ ಅಲ್ಲ: ಎಚ್ ಡಿ ದೇವೇಗೌಡ - JDS leader HD Devegowda

ಈಗಾಗಲೇ ಕುಮಾರಸ್ವಾಮಿ ಸೇರಿದಂತೆ ಕೆಲವು ಪ್ರಮುಖರು ಪಂಚರತ್ನ ಯಾತ್ರೆಯ ಮೂಲಕ ಜನರ ಬಳಿಗೆ ಹೋಗುತ್ತಿದ್ದಾರೆ. ಈಗ ಬಿಡುಗಡೆ ಆಗುತ್ತಿರುವ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿದಿನ ಪ್ರತಿ ಸರ್ವೆಯಲ್ಲೂ ಬದಲಾವಣೆ ಆಗುತ್ತಿರುತ್ತದೆ ಎಂದು ಹೆಚ್​ಡಿಡಿ ಹೇಳಿದ್ದಾರೆ.

ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ
author img

By

Published : Dec 1, 2022, 4:55 PM IST

ಮೈಸೂರು: ಜೆಡಿಎಸ್​ನಿಂದ ಬಿಡುಗಡೆಯಾಗುವ ಮೊದಲ ಅಭ್ಯರ್ಥಿಗಳ ಪಟ್ಟಿ ಶಾಶ್ವತ ಅಲ್ಲ. ಪ್ರತಿದಿನ ಹಾಗೂ ಪ್ರತಿ ಸರ್ವೆಯಲ್ಲೂ ಪಟ್ಟಿಯಲ್ಲಿ ಬದಲಾವಣೆ ಆಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮೈಸೂರಿನಲ್ಲಿ ಹೇಳಿದ್ದಾರೆ.

ನಂಜನಗೂಡಿನ ನಂಜುಂಡೇಶ್ವರ ದೇವರ ದರ್ಶನ ಪಡೆಯಲು ಮೂರು ವರ್ಷಗಳ ನಂತರ ಆಗಮಿಸಿದ ಎಚ್ ಡಿ ದೇವೇಗೌಡರು ಹಾಗೂ ಕುಟುಂಬದ ಸದಸ್ಯರು, ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಚ್ ಡಿ ದೇವೇಗೌಡ, ಮುಂದಿನ ತಿಂಗಳಿನಿಂದ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಈಗಾಗಲೇ ಕುಮಾರಸ್ವಾಮಿ ಸೇರಿದಂತೆ ಕೆಲವು ಪ್ರಮುಖರು ಪಂಚರತ್ನ ಯಾತ್ರೆಯ ಮೂಲಕ ಜನರ ಬಳಿಗೆ ಹೋಗುತ್ತಿದ್ದಾರೆ. ಈಗ ಬಿಡುಗಡೆ ಆಗುತ್ತಿರುವ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿದಿನ ಪ್ರತಿ ಸರ್ವೆಯಲ್ಲೂ ಬದಲಾವಣೆ ಆಗುತ್ತಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ನಂಜುಂಡೇಶ್ವರನಿಗೆ ವಿಶೇಷ ಹೋಮ.. ಪೂಜೆ ಸಲ್ಲಿಸಿದ ಎಚ್ ಡಿ ದೇವೇಗೌಡ ದಂಪತಿ

ಹಾಸನದ ಪ್ರೀತಮ್ ಗೌಡನಿಗೆ ಯಡಿಯೂರಪ್ಪ ಸರ್ಕಾರ ಸರ್ವ ಶಕ್ತಿಯನ್ನು ಕೊಟ್ಟಿದ್ದು, ಯಾವ್ಯಾವ ಕೆಲಸಕ್ಕೆ ಎಷ್ಟೆಷ್ಟು ಸಂಪಾದನೆ ಮಾಡಿದ್ದಾನೆ ಎಂಬುದು ಗೊತ್ತು. ಹೆದರುವವರು ನಾವಲ್ಲ. ಹಾಸನಕ್ಕೆ ಟಿಕೆಟ್ ಆಕಾಂಕ್ಷಿಗಳು ಬಹಳಷ್ಟು ಜನ ಇದ್ದು, ಕುಮಾರಸ್ವಾಮಿ ರೇವಣ್ಣ ಕೂತು ಬಗೆಹರಿಸುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.