ಮೈಸೂರು: ನಗರಸಭೆ ಸದಸ್ಯನ ಅವಾಜ್‌ಗೆ ಹೆದರಿದ ಅಧಿಕಾರಿಗಳು, ವಶಪಡಿಸಿಕೊಂಡಿದ್ದ ಪ್ಲಾಸ್ಟಿಕ್ ಬಿಟ್ಟು ತೆರಳಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ಪ್ಲಾಸ್ಟಿಕ್ ನಿಷೇಧ ಆದೇಶದ ಹಿನ್ನೆಲೆಯಲ್ಲಿ ನಗರದ ಬಜಾರ್ ರಸ್ತೆಯ ಮಸೀದಿ ಬಳಿ ಇರುವ ಅಂಗಡಿ ಮೇಲೆ ನಗರಸಭೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, 200 ಕೆ.ಜಿಯಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದರು.
ಈ ವೇಳೆ ಅಲ್ಲಿ ಪ್ರತ್ಯಕ್ಷನಾದ ನಗರಸಭೆ ಸದಸ್ಯ ಮಾಲಿಕ್ ಪಾಷಾ, ಯಾರ ಅನುಮತಿ ಪಡೆದು ದಾಳಿ ನಡೆಸುತ್ತಿದ್ದೀರಾ?, ಜಾಗ ಖಾಲಿ ಮಾಡಿ. ಇಲ್ಲವೇ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಧಮ್ಕಿ ಹಾಕಿದ್ದಾರೆ. ಈ ವೇಳೆ ಸಾರ್ವಜನಿಕವಾಗಿ ಅಧಿಕಾರಿಗಳು ಹಾಗೂ ಸದಸ್ಯನ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ದುಪ್ಪಟ್ಟು ದರ ವಸೂಲಿಗೆ ಮುಂದಾದ ಖಾಸಗಿ ಮಾಲೀಕರು
ವಶಪಡಿಸಿಕೊಂಡ ಪ್ಲಾಸ್ಟಿಕ್ ಅನ್ನು ಸಾರ್ವಜನಿಕರು ಹೊತ್ತೊಯ್ದಿದ್ದು, ಅಧಿಕಾರಿಗಳು ಅಂಗಡಿಗೆ ಬೀಗ ಹಾಕಿದರು. ಈ ವೇಳೆ ಬೀಗ ಕಿತ್ತುಕೊಳ್ಳಲು ಮುಂದಾದ ಸದಸ್ಯನಿಗೆ ತಿಳಿ ಹೇಳಿದರೂ, ಕೇಳದೆ ವಾರ್ಡ್ಗೆ ಕಾಲಿಡಲು ನನ್ನ ಅನುಮತಿ ಬೇಕೆಂದು ಧಮ್ಕಿ ಹಾಕಿದ್ದಾರೆ. ಇದರಿಂದ ಹೆದರಿದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.