ಮಂಡ್ಯ: ಇಲ್ಲಿನ ಮಳವಳ್ಳಿ ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಕಾಣಿಕೆ ಪೆಟ್ಟಿಗೆ ಹಾಗೂ ದೇವಿ ವಿಗ್ರಹದ ಮೇಲಿನ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.
ನಿನ್ನೆ (ಡಿ.17) ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಖದೀಮರು ದೇವಸ್ಥಾನ ಮುಂದಿನ ಸಿಸಿ ಕ್ಯಾಮೆರಾ ಜಖಂಗೊಳಿಸಿ, ಗೇಟ್ ಮುರಿದು ಒಳ ನುಗ್ಗಿದ್ದಾರೆ. ಕಾಣಿಕೆ ಪೆಟ್ಟಿಗೆಯನ್ನು ದೇವಸ್ಥಾನದ ಹೊರ ಭಾಗದಲ್ಲಿ ಒಡೆದು ತೆಗೆದಿದ್ದಾರೆ.
ಸಿಸಿ ಕ್ಯಾಮೆರಾದ ಡಿವಿಆರ್ ಅನ್ನು ಜಖಂಗೊಳಿಸಿದ್ದಾರೆ. ಮಳವಳ್ಳಿ ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.