ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ತಾಯಿ ಕೂಡ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ.
ಕುಶಾಲ್ (45) ಎಂಬುವರು ಮೃತ ಮಗನಾಗಿದ್ದು, ನಿನ್ನೆ ಗ್ರಾಮದ ತಮ್ಮ ನಿವಾಸದಲ್ಲಿ ಟಿವಿ ನೋಡುತ್ತಿರುವ ವೇಳೆ ಇದ್ದಕ್ಕಿದ್ದಂತೆ ಕುಶಾಲ್ಗೆ ಲೋ ಬಿಪಿಯಾಗಿ ಕೆಳಗೆ ಬಿದ್ದು ಒದ್ದಾಡಿದ್ದಾರೆ.
ಇದನ್ನು ಕಂಡ ಅಕ್ಕ-ಪಕ್ಕದ ಮನೆಯವರು ಕುಶಾಲ್ನನ್ನು ಮನೆಯಿಂದ ಹೊರಗಡೆಗೆ ಕರೆದುಕೊಂಡು ಬರುತ್ತಾರೆ. ಮನೆಯಿಂದ ಹೊರಗೆ ಬರುತ್ತಿದ್ದಂತೆ ಕುಶಾಲ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಹೆಂಡ್ತಿ ಇದ್ದರೂ ನಾದಿನಿ ಮೇಲೆ ಕಣ್ಣಾಕಿ ಅಪಹರಿಸಿದ್ದ ಭೂಪನ ಬಂಧನ
ಮನೆಯ ಪಕ್ಕದಲ್ಲೇ ಇದ್ದ ಕುಶಾಲ್ ತಾಯಿ ಲಕ್ಷ್ಮಮ್ಮ (69) ಏನ್ ಆಯ್ತು ಎಂದು ಬಂದು ನೋಡುವ ವೇಳೆಗೆ ತನ್ನ ಮಗ ಸಾವನ್ನಪ್ಪಿರುವ ದೃಶ್ಯ ಕಂಡು ಹೃದಯಾಘಾತವಾಗಿ ಅವರೂ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸಾವಿನಲ್ಲೂ ಕರುಳಬಳ್ಳಿ ಒಂದಾಗಿವೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ವಿಷಯ ತಿಳಿದು ಸ್ಥಳೀಯ ಶಾಸಕರಾದ ಸುರೇಶ್ ಗೌಡ ಗ್ರಾಮಕ್ಕೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ