ETV Bharat / state

ತಂದೆಗೆ ತಕ್ಕ ಮಗಳು.. ಪಿಎಸ್‌ಐ ಆದ ಮಗಳಿಗೆ ಅಧಿಕಾರ ಹಸ್ತಾಂತರ ಮಾಡಿದ ಅಪ್ಪ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಮಂಡ್ಯ ಸೆಂಟ್ರಲ್ ಪೊಲೀಸ್‌ ಠಾಣೆ - ಈಟಿವಿ ಭಾರತ್​ ಕರ್ನಾಟಕ

ತಂದೆ ಪಿಎಸ್​ಐ ಆಗಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್‌ ಠಾಣೆಯಲ್ಲಿ ಅದೇ ಸ್ಥಾನಕ್ಕೇರಿದ ಮಗಳು.

ಮಗಳಿಗೆ ಅಧಿಕಾರ ಹಸ್ತಾಂತರ ಮಾಡಿದ ತಂದೆ
ಮಗಳಿಗೆ ಅಧಿಕಾರ ಹಸ್ತಾಂತರ ಮಾಡಿದ ತಂದೆ
author img

By

Published : Jun 21, 2023, 4:38 PM IST

Updated : Jun 21, 2023, 7:52 PM IST

ತಂದೆಗೆ ತಕ್ಕ ಮಗಳು.. ಪಿಎಸ್‌ಐ ಆದ ಮಗಳಿಗೆ ಅಧಿಕಾರ ಹಸ್ತಾಂತರ ಮಾಡಿದ ಅಪ್ಪ

ಮಂಡ್ಯ : ಇಂದಿನ ಕಾಲದಲ್ಲಿ ಮಕ್ಕಳು ಅವರ ತಂದೆ ತಾಯಿ ತೋರಿದ ದಾರಿಯಲ್ಲಿ ನಡೆದರೆ ಅದೇ ದೊಡ್ಡ ಸಮಾಧಾನ. ಇನ್ನು ಮಕ್ಕಳು ಅಪ್ಪ ಮಾಡುತ್ತಿರುವ ವೃತ್ತಿಯನ್ನೇ ಹಿಡಿದು ಅವರು ನಿರ್ವಹಿಸಿದ ಹುದ್ದೆಗೇರಿದರೆ ಆ ಖುಷಿಗೆ ಪಾರವೇ ಇರುವುದಿಲ್ಲ. ಸದ್ಯ ಮಂಡ್ಯ ಸೆಂಟ್ರಲ್ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಮಗಳು ತನ್ನ ತಂದೆಯಂತೆಯೇ ಪಿಎಸ್‌ಐ ಆಗಿದ್ದು ಮಾತ್ರವಲ್ಲದೆ, ಅವರಿಂದಲೇ ಹುದ್ದೆಯ ಜವಾಬ್ದಾರಿಯನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ.

ಹೌದು, ತಂದೆ-ತಾಯಿಯ ವೃತ್ತಿಯನ್ನೇ ಮಕ್ಕಳು ಅನುಸರಿಸುವುದು ಸಹಜ. ಅದರಲ್ಲೂ ತನ್ನ ಹುದ್ದೆಯನ್ನು ಮೀರಿದ ಹುದ್ದೆಗೆ ಮಕ್ಕಳು ಹೋದಾಗ ಅಥವಾ ವೃತ್ತಿಯಲ್ಲಿ ಎದುರು-ಬದುರಾದಾಗ ಪೋಷಕರ ಸಂಭ್ರಮ ಹೇಳತೀರದು. ಇಂತಹದೊಂದು ಅಪರೂಪದ ಘಟನೆಗೆ ಮಂಡ್ಯ ಪೊಲೀಸ್‌ ಠಾಣೆ ಸಾಕ್ಷಿಯಾಗಿದೆ. ಇದೇ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಬಿ.ಎಸ್. ವೆಂಕಟೇಶ್ ಅವರು ತಾವು ನಿರ್ವಹಿಸುತ್ತಿದ್ದ ಹುದ್ದೆಯ ಚಾರ್ಜ್‌ ಅನ್ನು ತಮ್ಮ ಮಗಳು ಬಿ. ವಿ. ವರ್ಷಾ ಅವರಿಗೆ ಹಸ್ತಾಂತರಿಸಿದ್ದಾರೆ.

ಪಿಎಸ್‌ಐ ಬಿ.ಎಸ್. ವೆಂಕಟೇಶ್ ಅವರು ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ. ಈ ಹುದ್ದೆಗೆ ಅವರ ಮಗಳು ಬಿ.ವಿ. ವರ್ಷಾ ಇದೀಗ ನೇಮಕಗೊಂಡಿದ್ದಾರೆ. ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡ 2022ರ ಬ್ಯಾಚ್‌ನ ಪಿಎಸ್‌ಐ ಅಧಿಕಾರಿಯಾಗಿರುವ ವರ್ಷಾ ಅವರು ಕಲಬುರಗಿಯಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅದೃಷ್ಟವೆಂಬಂತೆ ತಂದೆ ಇದ್ದ ಹುದ್ದೆಗೆ ನೇಮಕವಾಗಿ ಅವರ ಮೊದಲ ಪೋಸ್ಟಿಂಗ್ ಕೂಡ ತನ್ನ ತಂದೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ಆಗಿದೆ. ತಂದೆಯಿಂದಲೇ ಪಿಎಸ್‌ಐ ಚಾರ್ಜ್​ ಪಡೆದುಕೊಂಡು ಪೊಲೀಸ್ ವೃತ್ತಿಜೀವನ ಆರಂಭಿಸಿದ್ದಾರೆ.

ಬಿ.ವಿ. ವರ್ಷಾ ಅವರು ಅರ್ಥಶಾಸ್ತ್ರದಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ. ಸೈನಿಕರಾಗಿ ಸೇವೆ ಸಲ್ಲಿಸಿದ ವರ್ಷಾ ಅವರ ತಂದೆ ವೆಂಕಟೇಶ್ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದವರು. 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ದೇಶದ ವಿವಿಧ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವುದರ ಜತೆಗೆ ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆ ಇವರದು. ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್‌ಐ ಪರೀಕ್ಷೆ ಪಡೆದು ಮಿಲಿಟರಿ ಕೋಟಾದಡಿ 2021ರ ಬ್ಯಾಚ್‌ನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ 2ನೇ ವೃತ್ತಿ ಜೀವನ ಆರಂಭಿಸಿದ್ದರು.

ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ವೆಂಕಟೇಶ್ ಕರ್ತವ್ಯ ನಿರ್ವಹಿಸಿದ್ದು, ಮತ್ತೆ ಮಂಡ್ಯ ಸೆಂಟ್ರಲ್ ಠಾಣೆಗೆ ಒಂದೂವರೆ ವರ್ಷದ ಹಿಂದೆ ವರ್ಗಾವಣೆಯಾಗಿ ಬಂದಿದ್ದರು. ಈಗ ತಾವು ನಿರ್ವಹಿಸುತ್ತಿದ್ದ ಹುದ್ದೆಯ ಚಾರ್ಜ್‌ಅನ್ನು ಪುತ್ರಿಗೆ ನೀಡಿ, ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ. ತಂದೆಯೇ ಮಗಳಿಗೆ ಚಾರ್ಜ್ ನೀಡುವ ವಿಶೇಷ ಕ್ಷಣಗಳಿಗೆ ಪೊಲೀಸ್ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು.

ಇದೇ ಸಂದರ್ಭದಲ್ಲಿ ಕಷ್ಟದ ದಿನಗಳನ್ನು ನೆನೆದು ಪಿಎಸ್‌ಐ ತಂದೆ ಮಗಳು ಕಣ್ಣೀರಿಟ್ಟದ್ದಾರೆ. ಪಿಎಸ್​ಐ ವೆಂಕಟೇಶ್​ ಅವರು ಮಾತನಾಡಿ, ನಾನು ಸೈನ್ಯದಲ್ಲಿ ಇದ್ದೆ. ಹೀಗಾಗಿ ಕುಟುಂಬದ ಜೊತೆ ಇರಲಿಲ್ಲ. ಮಕ್ಕಳನ್ನು ನಾನು ಓದಿಸಲು ಆಗಲಿಲ್ಲ. ನನ್ನ ಹೆಂಡತಿ ಮಗಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿದರು. ಈಗ ನನ್ನ ಮಗಳು ನನ್ನ ಹುದ್ದೆಗೆ ಬಂದಿರೋದು ತುಂಬ ಖುಷಿ ತಂದಿದೆ. ಈ‌ ಕ್ಷಣದಲ್ಲಿ ಸಂತೋಷದಿಂದ ಆನಂದಭಾಷ್ಪ ಬರುತ್ತಿದೆ ಎಂದು ಸಂತಸ ಹಂಚಿಕೊಂಡರು.

ಬಳಿಕ ಮಾತನಾಡಿದ ಪಿಎಸ್​ಐ ವರ್ಷಾ ಅವರು, ನನ್ನ ತಂದೆಯನ್ನು ಚಿಕ್ಕವಯಸ್ಸಿನಲ್ಲಿ ಮಿಸ್ ಮಾಡಿಕೊಂಡೆ. ತಂದೆ‌ ಸೈನ್ಯದಲ್ಲಿ ಇದ್ದರು. ಹಾಗಾಗಿ ನನ್ನ ತಾಯಿ ಸರ್ಕಾರಿ ಶಾಲೆಯಲ್ಲಿ ಓದಿಸಿದರು. ಇದರ ಜೊತೆಗೆ ಅಪ್ಪ-ಅಮ್ಮನ ಕಷ್ಟಗಳನ್ನು ನೋಡಿ ನಾನು ಬೆಳೆದೆ. ಈಗ ಅಪ್ಪನ ಸ್ಥಾನಕ್ಕೆ ಬಂದಿರೋದು ಖುಷಿ ತಂದಿದೆ ಎಂದು ಅಧಿಕಾರ ಸ್ವೀಕಾರದ ಕ್ಷಣ ನೆನೆದು ಆನಂದಭಾಷ್ಪ ಸುರಿಸಿದರು.

ಇದನ್ನೂ ಓದಿ : Mysugar Factory: ಮಂಡ್ಯ ರೈತರಿಗೆ ಸಿಹಿ ಸುದ್ದಿ! ಮೈಶುಗರ್ ಕಾರ್ಖಾನೆ ಮರು ಕಾರ್ಯಾರಂಭ

Last Updated : Jun 21, 2023, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.