ETV Bharat / state

ಗದ್ದೆಯಂತಾಗಿರುವ ರಸ್ತೆ... ಕೆಸರಿಗೆ ಸಿಲುಕಿಕೊಂಡ ಮೂರು ಟ್ರಾಕ್ಟರ್​ಗಳು! - kustagi news

ರೈತರೊಬ್ಬರ ಜಮೀನಿನಲ್ಲಿ ಬೆಳೆದ ಕೃಷಿ ಉತ್ಪನ್ನವನ್ನು ತರಲು ಟ್ರಾಕ್ಟರ್ ಮೂಲಕ ತೆರಳಿದ್ದ ವೇಳೆ ಟ್ರಾಕ್ಟರ್ ಸಿಲುಕಿಕೊಂಡಿದೆ. ಇದನ್ನು ಎಳೆಯಲು ಬಂದ ಇನ್ನೆರಡೂ ಟ್ರಾಕ್ಟರ್​ಗಳು ಕೂಡ ಈ ಕೆಸರಲ್ಲಿ ಸಿಲುಕಿಕೊಂಡಿವೆ.

road-problem-at-kustagi
ಕೆಸರಿಗೆ ಸಿಲುಕಿಕೊಂಡ ಮೂರು ಟ್ರಾಕ್ಟರ್​ಗಳು!
author img

By

Published : Jul 28, 2020, 12:48 AM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಕಲಕೇರಿ ಗ್ರಾಮದಿಂದ ಉಪ್ಪಾರ ಬಸಾಪುರ ಗ್ರಾಮಗಳ ಸಂಪರ್ಕದ ಗ್ರಾಮೀಣ ರಸ್ತೆ, ಚರಂಡಿ ನೀರಿನಿಂದ ಹಾಳಾಗಿದೆ. ಈ ರಸ್ತೆಯಲ್ಲಿ ಸಂಚಾರ ಮಾಡಲು ಹರಸಾಹಸವನ್ನೇ ಪಡಬೇಕಾಗಿದೆ.

ಯಾವುದೇ ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡಿದರೂ ಇಲ್ಲಿನ ಚರಂಡಿ ರೂಪದ ರಸ್ತೆಗೆ ಸಿಲುಕಿಕೊಳ್ಳುವುದು ಸಹಜ. ಇದಕ್ಕೆ ಉದಾಹರಣೆ ಎಂಬಂತೆ, ರೈತರೊಬ್ಬರ ಜಮೀನಿನಲ್ಲಿ ಬೆಳೆದ ಕೃಷಿ ಉತ್ಪನ್ನವನ್ನು ತರಲು ಟ್ರಾಕ್ಟರ್ ಮೂಲಕ ತೆರಳಿದ್ದ ವೇಳೆ ಟ್ರಾಕ್ಟರ್ ಸಿಲುಕಿಕೊಂಡಿದೆ. ಇದನ್ನು ಎಳೆಯಲು ಮತ್ತೊಂದು ಟ್ರಾಕ್ಟರ್​ ಕರೆಸಲಾಗಿದೆ. ಅದೂ ಸಹ ಮಣ್ಣಿಗೆ ಸಿಲುಕಿಕೊಂಡಿದೆ. ಇವೆರೆಡೂ ಟ್ರಾಕ್ಟರ್ ಹೊರತರಲು ಮತ್ತೊಂದು ಟ್ರಾಕ್ಟರ್ ನಿಂದ ಯತ್ನಿಸಿದಾಗ ಅದುಕೂಡ ಸಿಲುಕಿಕೊಂಡಿದೆ. ಮೂರು ಟ್ರಾಕ್ಟರ್​ಗಳು ಸಿಲುಕಿಕೊಂಡಾಗ ರೈತರು ಬೇರೆ ಮಾರ್ಗ ಇಲ್ಲದೆ ಇಲ್ಲದೆ ಜೆಸಿಬಿ ಯಂತ್ರ ತರಿಸಿ ಕೆಸರಿನ ಮಡುವಿನಲ್ಲಿ ಸಿಲುಕಿದ್ದ ಮೂರು ಟ್ರಾಕ್ಟರ್​ಗಳನ್ನು ಆ ರಸ್ತೆಯಿಂದ ಹೊರತಂದಿದ್ದಾರೆ.

ಕೆಸರಿಗೆ ಸಿಲುಕಿಕೊಂಡ ಮೂರು ಟ್ರಾಕ್ಟರ್​ಗಳು

ರಸ್ತೆಯನ್ನು ಸರಿಪಡಿಸಬೇಕು ಎಂದು ಕೇಸೂರು ಗ್ರಾ.ಪಂ. ಪಿಡಿಓ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಕೂಡಲೇ ಚರಂಡಿ ನೀರು ನಿಯಂತ್ರಿಸಿ, ರಸ್ತೆ ಸುಧಾರಿಸಬೇಕು ಎಂದು ರೈತರು ಆಗ್ರಹ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.