ಗಂಗಾವತಿ (ಕೊಪ್ಪಳ): ಕೊರೊನಾ ಸೋಂಕು ಹರಡುವ ಭೀತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಓಡಾಡುವ ಜನರಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಜಾರಿ ಮಾಡಿದ್ದರೂ, ನಗರದಲ್ಲಿ ಆದೇಶ ಪಾಲನೆಯಾಗದಿರುವುದು ಬೆಳಕಿಗೆ ಬಂದಿದೆ.
ಕೊರೊನಾ ಹಿನ್ನೆಲೆ ಕೇಂದ್ರ ಸರ್ಕಾರ ಬಡವರು, ಕೂಲಿ ಕಾರ್ಮಿಕರಿಗೆ ಉಪಯೊಗವಾಗಲಿ ಎಂಬ ಉದ್ದೇಶದಿಂದ ಜನ್ಧನ್ ಖಾತೆಗೆ ಹಣ ಜಮೆ ಮಾಡಿದೆ. ಆದರೆ ಖಾತೆಯಿಂದ ಹಣ ತೆಗೆಯಲು ನಗರದ ಬಹುತೇಕ ಬ್ಯಾಂಕುಗಳ ಮುಂದೆ ಖಾತೆದಾರರು ಮುಗಿಬೀಳುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಯಾವುದೇ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡದೇ ಜನ ಒಬ್ಬರ ಮೇಲೆ ಒಬ್ಬರು ಮುಗಿಬೀಳುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಭದ್ರತೆಗಾಗಿ ನಿಯೋಜಿಸಲಾಗುತ್ತಿರುವ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಇದ್ದರೂ ಜನರ ನಿಯಂತ್ರಣ ಸಾಧ್ಯವಾಗುತ್ತಿಲ್ಲ.