ETV Bharat / state

ನವವೃಂದಾವನ ಗಡ್ಡೆ ವಿವಾದ : ಉಭಯ ಮಠಗಳ ಮನವಿ ತಿರಸ್ಕರಿಸಿದ ಗಂಗಾವತಿ ತಹಶೀಲ್ದಾರ್​ - Tahsildar rejected the request of both mutt

ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಉಭಯ ಮಠಗಳು ಜುಲೈ 6ರಿಂದ ಜುಲೈ 8ರ ವರೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಆಚರಣೆ ಅವಕಾಶ ನಿರಾಕರಿಸಿ ತಹಶೀಲ್ದಾರ್​ ಆದೇಶಿಸಿದ್ದಾರೆ.

navavrundavan-gadde-controversy-dot-tahsildar-rejected-the-request-of-both-mutt
ನವವೃಂದಾವನ ಗಡ್ಡೆ ವಿವಾದ : ಉಭಯ ಮಠಗಳ ಮನವಿ ತಿರಸ್ಕರಿಸಿದ ತಹಶೀಲ್ದಾರ್​
author img

By

Published : Jun 29, 2023, 7:28 PM IST

ಗಂಗಾವತಿ (ಕೊಪ್ಪಳ) : ಮಾಧ್ವ ಪಂಥದ ಅನುಯಾಯಿಗಳ ಪ್ರಮುಖ ಧಾರ್ಮಿಕ ತಾಣವಾದ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಜುಲೈ 6ರಿಂದ ಜುಲೈ 8ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಧಾರ್ಮಿಕ ಆಚರಣೆಗಳಿಗೆ ತಹಶೀಲ್ದಾರ್ ಮಂಜುನಾಥ ಹಿರೇಮಠ ಅವಕಾಶ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.

ನವ ವೃಂದಾವನ ಗಡ್ಡೆಯಲ್ಲಿ ಜುಲೈ 6 ರಿಂದ 8ರ ವರೆಗೆ ಉತ್ತರಾದಿ ಮಠದಿಂದ ರಘುವರ್ಯ ತೀರ್ಥರ ಮಹಿಮೋತ್ಸವ ಹಾಗೂ ಅದೇ ಸಮಯಕ್ಕೆ ಜುಲೈ 6ರಿಂದ 8ರ ವರೆಗೆ ರಾಯರಮಠದಿಂದ ಜಯತೀರ್ಥರ ಆರಾಧನೆ ಹಮ್ಮಿಕೊಳ್ಳಲು ಸಿದ್ಧತೆ ನಡೆದಿತ್ತು. ಈ ಬಗ್ಗೆ ಉಭಯ ಮಠಗಳ ಅನುಯಾಯಿಗಳ ಸಭೆ ಕರೆದು ಚರ್ಚಿಸಲು ನಿರ್ಧರಿಸಲಾಗಿತ್ತು. ಉಭಯ ಮಠಗಳು ಸಮನ್ವಯ ಸಾಧಿಸಿ ಧಾರ್ಮಿಕ ಆಚರಣೆಗೆ ಒಮ್ಮತ ವ್ಯಕ್ತವಾಗದ ಹಿನ್ನೆಲೆ ಪೂಜೆಗೆ ಅವಕಾಶ ನಿರಕಾರಿಸಲಾಗಿದೆ. ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಸೂಕ್ತ ತೀರ್ಪು ಹೊರ ಬೀಳುವವರೆಗೂ ತಾತ್ಕಾಲಿಕವಾಗಿ ಯಾವ ಮಠದ ಅನುಯಾಯಿಗಳಿಗೂ ನವವೃಂದಾವನದ ಗಡ್ಡೆಯಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡಲಾಗದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ವಿವಾದ ಬಗೆಹರಿಸಲು ಮುಂದಾಗಿದ್ದ ಜಿಲ್ಲಾಡಳಿತ : ಉತ್ತರಾಧಿಮಠ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮಧ್ಯೆ ಉದ್ಭವಿಸಿರುವ ಪೂಜೆ ವಿವಾದವನ್ನು ಬಗೆಹರಿಸಲು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿತ್ತು. ಈ ಸಂಬಂಧ ತಹಶೀಲ್ದಾರ್ ಮಂಜುನಾಥ ಹಿರೇಮಠ ಅವರು​​ ಜೂನ್​ 27ರ ಮಂಗಳವಾರ ಸಂಜೆ ಐದು ಗಂಟೆಗೆ ಎರಡೂ ಮಠಗಳ ಅನುಯಾಯಿಗಳ ಸಭೆಯನ್ನು ತಹಶೀಲ್ದಾರ್ ಕಚೇರಿಯಲ್ಲಿ ಕರೆದಿದ್ದರು. ಆದರೆ ಸಭೆ ಫಲಪ್ರದವಾಗದ ಕಾರಣ ಉಭಯ ಮಠಗಳಿಗೆ ಪೂಜೆಗೆ ಅವಕಾಶ ನಿರಾಕರಿಸಿ ಆದೇಶಿಸಿದ್ದಾರೆ.

ಏನಿದು ಪೂಜಾ ವಿವಾದ : ಜುಲೈ6 ರಿಂದ 8ರ ವರೆಗೆ ಮೂರು ದಿನಗಳ ಕಾಲ ನವವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲು ಅವಕಾಶ ಕೋರಿ ಮಂತ್ರಾಲಯದ ಮಠವು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತ್ತು. ಇದೇ ಸಮಯಕ್ಕೆ ಅಂದರೆ ಜುಲೈ 6ರಿಂದ 8ರ ವರೆಗೆ ಮೂರು ದಿನಗಳ ಕಾಲ ರಘುವರ್ಯ ತೀರ್ಥರ ಮಹಿಮೋತ್ಸವ ಆಚರಣೆಗೆ ಅವಕಾಶ ಕೋರಿ ಉತ್ತರಾಧಿ ಮಠವೂ ತಹಶೀಲ್ದಾರ್​ ಅವರಿಗೆ ಬೇಡಿಕೆ ಸಲ್ಲಿಸಿತ್ತು. ಈ ಸಂಬಂಧ ತಹಶೀಲ್ದಾರ್​ ಉಭಯ ಮಠಗಳಲ್ಲಿ ಸಮನ್ವಯ ಸಾಧಿಸಲು ಸಭೆ ಕರೆದಿದ್ದರು.

ಈಗಾಗಲೇ ಈ ಎರಡೂ ಮಠಗಳ ಮಧ್ಯೆ, ನವವೃಂದಾವನದಲ್ಲಿ ಪೂಜೆಯ ವಾರಸತ್ವಕ್ಕೆ ಸಂಬಂಧಿಸಿದ ವ್ಯಾಜ್ಯ ಹೈಕೋರ್ಟ್​ನಲ್ಲಿ ನಡೆಯುತ್ತಿದೆ. ಇದರ ಮಧ್ಯೆ ವೃಂದಾವನಸ್ಥರಾಗಿರುವ ಯತಿಗಳ ಆರಾಧನೆಗೆ ಅವಕಾಶ ಕೋರಿ ಉಭಯ ಮಠಗಳು ಬೇಡಿಕೆ ಇಟ್ಟಿರುವುದು ಸಮಸ್ಯೆಗೆ ಕಾರಣವಾಗಿದೆ.

ಇದನ್ನೂ ಓದಿ : ನವವೃಂದಾವನ ಗಡ್ಡೆಯಲ್ಲಿ ಪೂಜೆ ವಿವಾದ: ತಹಶೀಲ್ದಾರ್ ನೇತೃತ್ವದಲ್ಲಿ ಉಭಯ ಮಠಗಳ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.