ETV Bharat / state

ಪ್ರೀತಿಸಿ ಮದುವೆಯಾದ ಜೋಡಿಗಿಲ್ಲ ರಕ್ಷಣೆ... ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ ಲವ್​ ಬರ್ಡ್ಸ್​!

ಪ್ರೀತಿಸಿ ಮದುವೆಯಾಗಿರುವ ಜೋಡಿಯೊಂದು ತಮಗೆ ರಕ್ಷಣೆ‌ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ.

author img

By

Published : Oct 19, 2019, 4:40 PM IST

ರಕ್ಷಣೆ ಕೋರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ ಲವ್​ ಬರ್ಡ್ಸ್​

ಕೊಪ್ಪಳ: ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಜೋಡಿಯೊಂದು ತಮಗೆ ರಕ್ಷಣೆ ನೀಡುವಂತೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ.

ಜಿಲ್ಲೆಯ ಕುಷ್ಟಗಿ ಪಟ್ಟಣದ ನಿವಾಸಿಗಳಾದ ಸಂಗಮೇಶ್ ಹಾಗೂ ವಿದ್ಯಾ ಎಂಬ ಪ್ರೇಮಿಗಳು ತಮಗೆ ರಕ್ಷಣೆ‌ ನೀಡುವಂತೆ ಮನವಿ ಮಾಡಿದ್ದಾರೆ. ಸಂಗಮೇಶ್ ಹಾಗೂ ವಿದ್ಯಾ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರಂತೆ. ಈಗಾಗಲೇ‌ ಮನೆ ಬಿಟ್ಟು ಹೋಗಿ ಅಕ್ಟೋಬರ್ 13ರಂದು ಹುಲಿಗೆಮ್ಮ‌ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ನಾವಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ಆದರೆ, ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆಂದು ವಿದ್ಯಾ ಮನೆಯವರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಅಪಹರಿಸಿಕೊಂಡು ಹೋಗಿಲ್ಲ ಎಂದು ಯುವಕ ಅವಲತ್ತುಕೊಂಡಿದ್ದಾನೆ.

ಈ ಕುರಿತು ವಿದ್ಯಾ ಮಾತನಾಡಿ, ನಾನೇ ಸ್ವಇಚ್ಛೆಯಿಂದ ಹೋಗಿ ಮದುವೆಯಾಗಿದ್ದೇನೆ. ಸಂಗಮೇಶ್​ ನನ್ನನ್ನು ಅಪಹರಿಸಿಲ್ಲ. ಹೀಗಾಗಿ, ಸಂಗಮೇಶ್​ ಮೇಲೆ ನಮ್ಮ ಮನೆಯವರು ನೀಡಿರುವ ಅಪಹರಣ ದೂರು ಹಿಂಪಡೆಯಬೇಕು. ಇದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಬಂದಿದ್ದೇವೆ ಎಂದಿದ್ದಾರೆ.

Intro:

Body:ಕೊಪ್ಪಳ:- ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಜೋಡಿಯೊಂದು ಇಂದು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ರಕ್ಷಣೆ ಕೋರಿ ಬಂದಿತ್ತು. ಜಿಲ್ಲೆಯ ಕುಷ್ಟಗಿ ಪಟ್ಟಣದ ನಿವಾಸಿಗಳಾದ ಸಂಗಮೇಶ್ ಹಾಗೂ ವಿದ್ಯಾ ಎಂಬ ಪ್ರೇಮಿಗಳು ತಮಗೆ ರಕ್ಷಣೆ‌ ನೀಡುವಂತೆ ಮನವಿ ಮಾಡಿದ್ದಾರೆ. ಸಂಗಮೇಶ್ ಹಾಗೂ ವಿದ್ಯಾ ಕಳೆದ ನಾಲ್ಕಯ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರಂತೆ. ಈಗಾಗಲೇ‌ ಮನೆ ಬಿಟ್ಟು ಹೋಗಿ ಅಕ್ಟೋಬರ್ 13 ರಂದು ಹುಲಿಗೆಮ್ಮ‌ ದೇವಸ್ಥಾನದಲ್ಲಿ ಮದುವೆಯಾಗಿದ್ದಾರಂತೆ. ನಾವಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ಆದರೆ, ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ವಿದ್ಯಾ ಮನೆಯವರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಅಪಹರಿಸಿಕೊಂಡು ಹೋಗಿಲ್ಲ ಎಂದು ಯುವಕ ಅವಲತ್ತುಕೊಂಡಿದ್ದಾನೆ. ನಾನೇ ಸ್ವಯಂ ಆಗಿ ಹೋಗಿ ಮದುವೆಯಾಗಿದ್ದೇನೆ. ಸಂಗಮೇಶ ನನ್ನ ಅಪಹರಿಸಿಲ್ಲ. ಹೀಗಾಗಿ, ಸಂಗಮೇಶ ಮೇಲೆ ನಮ್ಮ ಮನೆಯವರು ನೀಡಿರುವ ಅಪಹರಣ ದೂರು ಹಿಂಪಡೆಯಬೇಕು. ಇದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಬಂದಿದ್ದೇವೆ ಎಂದು ಆ ಲವ್ ಬರ್ಡ್ಸ್ ತಿಳಿಸಿದ್ದಾರೆ.

ಬೈಟ್1:- ಸಂಗಮೇಶ, ಪ್ರೇಮಿ

ಬೈಟ್2:- ವಿದ್ಯಾ, ಸಂಗಮೇಶನ ಪ್ರೇಯಸಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.