ETV Bharat / state

ಅಂಜನಾದ್ರಿ ಬೆಟ್ಟದಲ್ಲಿ ಪ್ರತ್ಯಕ್ಷವಾದ ಚಿರತೆ: ಭಕ್ತರಲ್ಲಿ ಆತಂಕವೋ ಆತಂಕ! - ಚಿರತೆ ಪ್ರತ್ಯಕ್ಷ

ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ನಡುರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ದೇವಾಲಯದ ಕಂದಾಯ ಇಲಾಖೆಯ ಅಧಿಕಾರಿಗಳು ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

Leopard found in anjanadri hill
author img

By

Published : Oct 11, 2019, 2:10 PM IST

ಗಂಗಾವತಿ : ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ನಡುರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಈ ಬಗ್ಗೆ ದೇಗುಲಕ್ಕೆ ಭೇಟಿ ನೀಡುವ ಭಕ್ತರಲ್ಲಿ ನಡುಕ ಹುಟ್ಟಿದೆ.

ಅಂಜನಾದ್ರಿ ಬೆಟ್ಟದಲ್ಲಿ ಪ್ರತ್ಯಕ್ಷವಾದ ಚಿರತೆ

ದೇವಸ್ಥಾನದ ಹೊರಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯಾವಳಿಗಳು ಸೆರೆಯಾಗಿದ್ದು, ಬೆಟ್ಟದ ಇಳಿಜಾರಿನಿನಿಂದ ಚಿರತೆ ಮೇಲಕ್ಕೆ ಹೋಗಿರುವ ಫುಟೇಜ್ ಲಭ್ಯವಾಗಿದೆ. ಈ ಕುರಿತು ದೇವಾಲಯದ ಕಂದಾಯ ಇಲಾಖೆಯ ಅಧಿಕಾರಿಗಳು ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಅಪಾಯ ಸಂಭವಿಸುವ ಮುನ್ನವೆ ಎಚ್ಚೆತ್ತು ಅರಣ್ಯಾಧಿಕಾರಿಗಳು ಬೋನು ಇಟ್ಟು ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸುತ್ತಿದ್ದಾರೆ.

Intro:ತಾಲ್ಲೂಕಿನ ಐತಿಹಾಸಿಕ ಮತ್ತು ಧಾಮರ್ಿಕ ತಾಣವಾದ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ನಡುರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಇದು ದೇಗುಲಕ್ಕೆ ಭೇಟಿ ನೀಡುವ ಭಕ್ತರಲ್ಲಿ ನಡುಕ ಹುಟ್ಟಿಸಿದೆ.
Body:
ಅಂಜನಾದ್ರಿಯಲ್ಲಿ ಘಟನೆ: ನಡುರಾತ್ರಿ ಬಂದು ನಡುಕು ಹುಟ್ಟಿಸಿದ ಚಿರತೆ
ಗಂಗಾವತಿ:
ತಾಲ್ಲೂಕಿನ ಐತಿಹಾಸಿಕ ಮತ್ತು ಧಾಮರ್ಿಕ ತಾಣವಾದ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ನಡುರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಇದು ದೇಗುಲಕ್ಕೆ ಭೇಟಿ ನೀಡುವ ಭಕ್ತರಲ್ಲಿ ನಡುಕ ಹುಟ್ಟಿಸಿದೆ.
ದೇವಸ್ಥಾನದ ಹೊರಭಾಗದಲ್ಲಿನ ದೃಶ್ಯವಳಿಗಳ ಸೆರೆ ಹಿಡಿಯುವ ಉದ್ದೇಶಕ್ಕೆ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬೆಟ್ಟದ ಇಳಿಜಾರಿನಿನಿಂದ ಮೇಲಕ್ಕೆ ಬರುವ ಚಿರತೆ, ಬಳಿಕ ಹೆಜ್ಜೆ ಹಾಕುತ್ತಾ ಮೆಟ್ಟಿಲು ಇರುವ ಕಡೆಗೆ ಹೋಗಿರುವ ಫುಟೇಜ್ ಈಗ ಲಭ್ಯವಾಗಿದೆ.
ದೇಗುಲದ ಉಸ್ತಿವಾರಿ ವಹಿಸಿಕೊಂಡಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ದೇಗುಲಕ್ಕೆ ಭೇಟಿ ನೀಡುವ ಭಕ್ತರ ಪೈಕಿ ಹಲವರು ರಾತ್ರಿ ದೇಗುಲದಲ್ಲಿ ಉಳಿದು ಬಯಲು ಪ್ರದೇಶದಲ್ಲಿ ಮಗುತ್ತಾರೆ.
ಅಪಾಯ ಸಂಭವಿಸುವ ಮುನ್ನವೆ ಈ ಬಗ್ಗೆ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಬೋನು ಇಟ್ಟು ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಭಕ್ತರು ಒತ್ತಾಯಿಸಿದ್ದಾರೆ.

Conclusion:ಅಪಾಯ ಸಂಭವಿಸುವ ಮುನ್ನವೆ ಈ ಬಗ್ಗೆ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಬೋನು ಇಟ್ಟು ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಭಕ್ತರು ಒತ್ತಾಯಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.