ರಾಯಚೂರು: ಇಲ್ಲಿನ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ನಲಿನ್ ಅತುಲ್ ಹಾಗೂ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಮ್ಮ ಪತ್ನಿ ಜೊತೆ ಬಂದು ಮತದಾನ ಮಾಡಿದರು.
ಜಿ.ಪಂ ಸಿಇಒ ನಲಿನ್ ಅತುಲ್ ಅವರಿಂದ ಮತದಾನ...
ರಾಯಚೂರಿನಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ನಲಿನ್ ಅತುಲ್ ಮತ ಚಲಾಯಿಸಿದರು. ಇದೇ ವೇಳೆ ಸ್ವಯಂಸೇವಕ ಮಕ್ಕಳೊಂದಿಗೆ ಮಾತನಾಡಿದರು. ಅಲ್ಲದೆ ವಿಕಲ ಚೇತನರಿಗೆ ವ್ಹೀಲ್ ಚೇರ್ ನೀಡಿರುವ ಕಾರ್ಯವನ್ನು ಶ್ಲಾಘಿಸಿದರು.
ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮತದಾನ :
ಇನ್ನು ಕೊಪ್ಪಳದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಮ್ಮ ಪತ್ನಿ ಜೊತೆ ಬಂದು ಮತದಾನ ಮಾಡಿದರು. ನಗರದ ಬಸವೇಶ್ವರ ಸರ್ಕಲ್ ಬಳಿ ಇರುವ ಬೂತ್ ಸಂಖ್ಯೆ 132ರ ಸಖಿ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಜಿಲ್ಲಾಧಿಕಾರಿ ಮತ ಚಲಾಯಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ಕೆಲ ಬೂತ್ಗಳ ಮತಯಂತ್ರಗಳಲ್ಲಿ ತಾಂತ್ರಿಕ ತೊಂದರೆ ಕಂಡು ಬಂತು. ಅಂತಹ ಬೂತ್ಗಳಲ್ಲಿ ಸಮಸ್ಯೆ ಪರಿಹರಿಸಲಾಗಿದೆ. ಈಗ ಯಾವುದೇ ಸಮಸ್ಯೆಗಳಿಲ್ಲ. ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಕ್ಷೇತ್ರದ ಕೆಲವೆಡೆ ಕೆಲವರು ವೋಟ್ ಮಾಡುತ್ತಿರುವ ಹಾಗೂ ವೋಟ್ ಗೌಪ್ಯತೆಯನ್ನು ಬಹಿರಂಗ ಮಾಡಿರುವ ಪ್ರಕರಣಗಳು ನಡೆದಿದ್ದು, ಅಂತಹವರನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ವೋಟ್ ಹಾಕುವ ಸಲುವಾಗಿ ವೇತನ ಸಹಿತ ರಜೆ ನೀಡದ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.