ಕೊಪ್ಪಳ: ನಗರದ ಬಿಸಿಎಂ ಹಾಸ್ಟೆಲ್ನಲ್ಲಿ ಇತ್ತೀಚಿಗೆ ಸಂಭವಿಸಿದ್ದ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಜೆಸ್ಕಾಂ 5 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಜೆಸ್ಕಾಂ ನೀಡಿದ ಪರಿಹಾರದ ಚೆಕ್ನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮೃತ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಇಂದು ಹಸ್ತಾಂತರಿಸಿದ್ರು.
ಘಟನೆಯಲ್ಲಿ ಮೃತಪಟ್ಟ ತಾಲೂಕಿನ ಲಾಚನಕೇರಿ ಗ್ರಾಮದ ವಿದ್ಯಾರ್ಥಿ ಗಣೇಶ ಕುರಿ ನಿವಾಸಕ್ಕೆ ತೆರಳಿ ಶಾಸಕ ಹಿಟ್ನಾಳ್ ಪರಿಹಾರದ ಚೆಕ್ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ರು.