ETV Bharat / state

ಕಾಸಿಲ್ಲದೆ ಮುಂಬೈನಲ್ಲಿ ಊಟಕ್ಕಾಗಿ ಪರದಾಡುತ್ತಿದೆ ಹಜ್​ ಯಾತ್ರೆಗೆ ತೆರಳಿದ್ದ ಕುಟುಂಬ

ಭಾರತ ಲಾಕ್​ಡೌನ್​ ಆದ ಹಿನ್ನೆಲೆಯಲ್ಲಿ ಹಜ್​ ಯಾತ್ರೆಗೆ ತೆರಳಿದ್ದ ಕೊಪ್ಪಳ ಮೂಲದ ಕುಟುಂಬವೊಂದು ಮುಂಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಊಟ ನೀರಿಗೂ ತೊಂದರೆಯಾಗಿದೆ. ಈ ಕುರಿತು ಕುಟುಂಬವು ವಿಡಿಯೋವೊಂದನ್ನು ಮಾಡಿದ್ದು, ತಮ್ಮನ್ನು ಊರಿಗೆ ಕರೆಸಿಕೊಳ್ಳುವಂತೆ ಮನವಿ ಮಾಡಿದೆ.

author img

By

Published : Mar 29, 2020, 8:58 PM IST

Indira nagar people  Stuck in Bumbai
ಬಾಂಬೆಯಲ್ಲಿ ಸಿಲುಕಿರುವ ಇಂದಿರಾನಗರದ ಕುಟುಂಬ

ಗಂಗಾವತಿ/ಕೊಪ್ಪಳ: ಹಜ್​ ಯಾತ್ರೆಗೆ ತೆರಳಿದ್ದ ಇಲ್ಲಿನ ಇಂದಿರಾನಗರ ಮೂಲದ ಕುಟುಂಬವೊಂದು ಲಾಕ್​ಡೌನ್​ ಪರಿಣಾಮ ಮುಂಬೈನಲ್ಲಿ ಸಿಲುಕಿದ್ದು, ಊಟ, ಉಪಹಾರಕ್ಕೂ ಪರದಾಡುತ್ತಿದೆ.

ಸ್ವಗ್ರಾಮಕ್ಕೆ ಕರೆಸಿಕೊಳ್ಳುವಂತೆ ವಿಡಿಯೋ ಮೂಲಕ ಮನವಿ ಮಾಡಿದ ಇಂದಿರಾನಗರದ ಕುಟುಂಬ.

ಕೂಲಿ ಕಾರ್ಮಿಕರಾಗಿರುವ ರಜಾಕ್ ಹಾಗೂ ಆತನ ತಂದೆ ತಾಯಿ ಹಾಗೂ ಸಹೋದರ ಒಟ್ಟು ನಾಲ್ಕು ಮಂದಿ ಕಳೆದ ಫೆಬ್ರವರಿಯಲ್ಲಿ ಹಜ್ ಯಾತ್ರೆ ಕೈಗೊಂಡಿದ್ದರು. ಆದರೆ ಮರಳುವಷ್ಟರಲ್ಲಿ ಇಡೀ ದೇಶ ಲಾಕ್​ಡೌನ್​ ಆಗಿತ್ತು. ಹೀಗಾಗಿ ಸುರಕ್ಷಿತವಾಗಿ ಊರು ಸೇರಿಕೊಳ್ಳಲಾಗದೇ ಇಡೀ ಕುಟುಂಬ ಪರದಾಡುತ್ತಿದೆ. ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾಗಿದ್ದು, ಊಟ, ಉಪಹಾರಕ್ಕೂ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕೂಡಲೇ ನಮ್ಮನ್ನು ಸ್ವಗ್ರಾಮಕ್ಕೆ ಕರೆಸಿಕೊಳ್ಳಿ ಎಂದು ಕುಟುಂಬವು ವಿಡಿಯೋ ಮೂಲಕ ಮನವಿ ಮಾಡಿದೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜಿಲ್ಲಾಡಳಿತ ಈ ಕುಟುಂಬವನ್ನು ರಕ್ಷಿಸುವ ನಿಟ್ಟಿನಲ್ಲಿ ಯತ್ನ ನಡೆಸಿದೆ ಎಂದು ತಿಳಿದು ಬಂದಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.