ETV Bharat / state

ಕ್ಷುಲ್ಲಕ ಕಾರಣಕ್ಕೆ ಟೋಲ್​ ಪ್ಲಾಜಾದಲ್ಲಿ ಗಲಾಟೆ.. ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ.. - ಗಲಾಟೆ

ಟೋಲ್​ಗೇಟ್​ನ ಚೆಕ್​ಪಾಯಿಂಟ್​ ಬಳಿಗೆ ನಿಯೋಜಿಸಲಾಗಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಕೆಲಸಕ್ಕೆ ಟೋಲ್​ ಪ್ಲಾಜಾದ ಸಿಬ್ಬಂದಿ ಹಸ್ತಕ್ಷೇಪ ಮಾಡಿದ್ದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

quarrel
ಗಲಾಟೆ
author img

By

Published : May 8, 2020, 4:02 PM IST

ಗಂಗಾವತಿ : ಕೊರೊನಾ ತುರ್ತು ಕಾರ್ಯಕ್ಕೆ ನಿಯೋಜಿತವಾದ ಆರೋಗ್ಯ ಸಿಬ್ಬಂದಿ ಹಾಗೂ ಟೋಲ್​ ಪ್ಲಾಜಾದಲ್ಲಿನ ಕೆಲ ಸಿಬ್ಬಂದಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿರುವ ಘಟನೆ ತಾಲೂಕಿನ ಹೇಮಗುಡ್ಡದ ಬಳಿ ಸಂಭವಿಸಿದೆ.

ಮೊದಲು ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮಧ್ಯೆ ಗಲಾಟೆ ನಡೆದಿದೆ. ಆ ಬಳಿಕ ಟೋಲ್ ಪ್ಲಾಜಾದ ಸಿಬ್ಬಂದಿ ಮಧ್ಯೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಎರಡೂ ಇಲಾಖೆಯ ಸಿಬ್ಬಂದಿ ಮಧ್ಯೆ ಕರ್ತವ್ಯ ನಿರ್ವಹಣೆಯ ವಿಚಾರವಾಗಿ ಈ ಗಲಾಟೆ ಆರಂಭವಾಗಿದೆ ಎನ್ನಲಾಗಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಗಲಾಟೆ ದೃಶ್ಯ..

ಟೋಲ್​ಗೇಟ್​ನ ಚೆಕ್​ಪಾಯಿಂಟ್​ ಬಳಿಗೆ ನಿಯೋಜಿಸಲಾಗಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಕೆಲಸಕ್ಕೆ ಟೋಲ್​ ಪ್ಲಾಜಾದ ಸಿಬ್ಬಂದಿ ಹಸ್ತಕ್ಷೇಪ ಮಾಡಿದ್ದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

ಘಟನೆಯ ಸಂಪೂರ್ಣ ದೃಶ್ಯ ಟೋಲ್​ಪ್ಲಾಜಾದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮೀಣ ಠಾಣೆಯ ಪೊಲೀಸರು, ಟೋಲ್ ಮತ್ತು ಆರೋಗ್ಯ ಇಲಾಖೆಯ ನೌಕರರ ಮಧ್ಯೆ ಗಲಾಟೆ ನಡೆದಿದೆ. ಈ ಬಗ್ಗೆ ಠಾಣೆಗೆ ಬಂದು ದೂರು ಆಧರಿಸಿ ಗಲಾಟೆ ಮಾಡಿದವರಿಗೆ ನೋಟಿಸ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.