ETV Bharat / state

ಒಂದು ಮಳೆಯಿಂದ ಹೆಸರಿಗೆ ಬಂತು ಜೀವ ಕಳೆ: ಉತ್ತಮ ಇಳುವರಿಯ ವಿಶ್ವಾಸ

ಕುಷ್ಟಗಿ ತಾಲೂಕಿನಲ್ಲಿ ಇನ್ನೂ 4 ದಿನ ಉತ್ತಮ ಮಳೆ ಆಗಲಿದೆ ಎಂದು ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ನಾಗನಗೌಡ ಪೊಲೀಸ್​ ಪಾಟೀಲ ತಿಳಿಸಿದ್ದಾರೆ.

author img

By

Published : Jun 11, 2020, 11:21 PM IST

dsdd
ಒಂದು ಮಳೆಯಿಂದ ಹೆಸರಿಗೆ ಬಂತು ಜೀವ ಕಳೆ

ಕುಷ್ಟಗಿ: ಮಳೆ ಕೊರತೆಯಿಂದ ಬಾಡುವ ಸ್ಥಿತಿಗೆ ತಲುಪಿದ್ದ ಹೆಸರುಕಾಳು ಬೆಳೆ ಬುಧವಾರ ರಾತ್ರಿ ಸುರಿದ ಸಾಧಾರಣ ಮಳೆಯಿಂದ ಚೇತರಿಸಿಕೊಂಡಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಹೆಸರಿನ ಇಳುವರಿ ರೈತರಿಗೆ ಖಾತ್ರಿಯಾಗಿದೆ.

ಒಂದು ಮಳೆಯಿಂದ ಹೆಸರಿಗೆ ಬಂತು ಜೀವ ಕಳೆ

ರೋಹಿಣಿ ನಂತರ ಮೃಗಶಿರಾ ಆರಂಭಗೊಂಡಿದ್ದರೂ, ಮಳೆಯ ಪೂರಕ ವಾತವರಣವಿಲ್ಲದೆ ಕುಗ್ಗಿದ್ದ ರೈತರಿಗೆ ಬುಧವಾರ ರಾತ್ರಿ ಸುರಿದ ಅಲ್ಪಸ್ವಲ್ಪ ಮಳೆ ಚೇತರಿಕೆ ಕಂಡಿದೆ. ತಾಲೂಕಿನ 6 ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ಮಾಹಿತಿಯಂತೆ ತಾವರಗೇರಾ (55 ಮಿ.ಮೀ.), ಕಿಲ್ಲಾರಹಟ್ಟಿ (32.4 ಮಿ.ಮೀ) ದೋಟಿಹಾಳ (21.2 ಮಿ.ಮೀ) ಉತ್ತಮ ಮಳೆ ಬಿದ್ದಿದೆ. ಹನುಮಸಾಗರ ಹೊರತುಪಡಿಸಿ, ಹನುಮನಾಳ ಹಾಗೂ ಕುಷ್ಟಗಿ ಮಳೆ ಮಾಪನ ಕೇಂದ್ರಗಳ ಪ್ರದೇಶದ ವ್ಯಾಪ್ತಿಯಲ್ಲಿ ಸಾಧಾರಣ ತುಂತುರು ಮಳೆಯಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 7,500 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 6,800 ಹೆಕ್ಟೇರ್ ಬಿತ್ತನೆಯಾಗಿದ್ದು, ಬಹುತೇಕ ರೈತರು ರೈತ ಸಂಪರ್ಕ ಕೇಂದ್ರದ ಬಿಜಿಎಸ್-9 ತಳಿ ಬಿತ್ತನೆ ಮಾಡಿದ್ದಾರೆ. ಹಳದಿ ರೋಗದಿಂದ ಈ ಬೆಳೆ ಮುಕ್ತವಾಗಿದ್ದು, ಸದ್ಯ ಹೂ, ಕಾಯಿ ಕಟ್ಟುವ ಹಂತದಲ್ಲಿದ್ದು,ಮಳೆಯಿಂದ ಬಾಡಿದ ಹೆಸರು ಬೆಳೆಗೆ ಜೀವ ಬಂದಿದೆ. ಈ ಬಗ್ಗೆ ಮಾತನಾಡಿರುವ ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ನಾಗನಗೌಡ ಪೊಲೀಸ್​ ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಂ.ಬಿ. ರವಿ, ನೀಡಿದ ಮಾಹಿತಿಯಂತೆ ಕುಷ್ಟಗಿ ತಾಲೂಕಿನಲ್ಲಿ ಇನ್ನೂ 4 ದಿನ ಉತ್ತಮ ಮಳೆ ಆಗಲಿದೆ. ಇದರಿಂದ ಸದ್ಯ ಶೇ.30ರಷ್ಟು ಬಿತ್ತನೆಯಾಗಿದ್ದು,ಇನ್ನೂ ಬಿತ್ತನೆ ಕ್ಷೇತ್ರ ವಿಸ್ತಾರಗೊಳ್ಳಲಿದೆ. ಈ ಬಾರಿ ರೈತರು ನವಣೆ ಬಿತ್ತನೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ನವಣೆ ಬಿತ್ತನೆ ಬೀಜ 4 ಕೆ.ಜಿ. ಪ್ಯಾಕೆಟ್​ಗೆ 250 ರೂಪಾಯಿಗೆ ಲಭ್ಯವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.