ETV Bharat / international

ಮಧ್ಯ ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: 18 ಸಾವು - Israel Hamas War - ISRAEL HAMAS WAR

ಮಧ್ಯ ಗಾಜಾದಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 18 ಜನ ಸಾವಿಗೀಡಾಗಿದ್ದಾರೆ.

ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ (ಸಂಗ್ರಹ ಚಿತ್ರ)
ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ (ಸಂಗ್ರಹ ಚಿತ್ರ) (IANS)
author img

By PTI

Published : Oct 6, 2024, 12:12 PM IST

ದೇರ್ ಅಲ್-ಬಲಾಹ್(ಗಾಜಾ ಪಟ್ಟಿ): ಮಧ್ಯ ಗಾಜಾದಲ್ಲಿ ಭಾನುವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ದೇರ್ ಅಲ್-ಬಲಾಹ್ ಪಟ್ಟಣದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಬಳಿ ಸ್ಥಳಾಂತರಗೊಂಡ ಜನ ಆಶ್ರಯ ಪಡೆದಿದ್ದ ಮಸೀದಿಯ ಮೇಲೆ ಈ ದಾಳಿ ನಡೆದಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರೊಬ್ಬರು ಆಸ್ಪತ್ರೆಯ ಶವಾಗಾರದಲ್ಲಿನ ಶವಗಳನ್ನು ಎಣಿಸಿ 18 ಜನ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದ್ದಾರೆ. ಮೃತರೆಲ್ಲರೂ ಪುರುಷರಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಮಸೀದಿಯ ಮೇಲಿನ ದಾಳಿಯ ಬಗ್ಗೆ ಇಸ್ರೇಲ್ ಮಿಲಿಟರಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಲೆಬನಾನ್​ನಲ್ಲಿನ ಹಿಜ್ಬುಲ್ಲಾ ಮತ್ತು ಹಮಾಸ್ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಶನಿವಾರ ಬಾಂಬ್ ದಾಳಿ ನಡೆಸಿದ ನಂತರ ಭಾನುವಾರ ಮುಂಜಾನೆ ಗಾಜಾ ಮೇಲಿನ ಈ ದಾಳಿ ನಡೆದಿದೆ.

ಇಸ್ರೇಲ್ ದಾಳಿಗಳಿಂದ ಗಾಜಾದಲ್ಲಿ ಮೃತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಂಘರ್ಷ ಆರಂಭವಾದಾಗಿನಿಂದ ಈವರೆಗೆ ಸುಮಾರು 42 ಸಾವಿರ ಜನ ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಮೃತರ ಪೈಕಿ ನಾಗರಿಕರೆಷ್ಟು ಮತ್ತು ಹಮಾಸ್ ಉಗ್ರರೆಷ್ಟು ಎಂಬ ಬಗ್ಗೆ ಸಚಿವಾಲಯ ಮಾಹಿತಿ ನೀಡಿಲ್ಲ. ಸತ್ತವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದಾರೆ.

ಲೆಬನಾನ್ ಮೇಲೆಯೂ ಇಸ್ರೇಲ್ ದಾಳಿ ಮುಂದುವರೆದಿದ್ದು, ಅಲ್ಲಿ ಆಶ್ರಯ ಪಡೆದಿದ್ದ ಗಾಜಾ ನಿರಾಶ್ರಿತರು ಸೇರಿದಂತೆ ಸಾವಿರಾರು ಸ್ಥಳೀಯ ನಾಗರಿಕರು ಈ ಪ್ರದೇಶದಿಂದ ಪಲಾಯನ ಮಾಡುತ್ತಿದ್ದಾರೆ.

ಬೈರುತ್​ನ ದಕ್ಷಿಣದ ಅಂಚಿನಲ್ಲಿರುವ, ಶಿಯಾ ಸಮುದಾಯದವರು ಹೆಚ್ಚಾಗಿ ವಾಸಿಸುವ ಉಪನಗರಗಳನ್ನು ಹೊಂದಿರುವ ದಹಿಯೆಹ್​ನಲ್ಲಿನ ನಿವಾಸಿಗಳು ಅಲ್ಲಿಂದ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಮಿಲಿಟರಿ ಎಚ್ಚರಿಕೆ ನೀಡಿತ್ತು. ನಂತರ ಕೆಲವೇ ಹೊತ್ತಿನಲ್ಲಿ ಶನಿವಾರ ಮಧ್ಯರಾತ್ರಿಯ ಸುಮಾರಿಗೆ ದಹಿಯೆಹ್​ನ ಹಲವಾರು ಪ್ರದೇಶಗಳ ಮೇಲೆ ಇಸ್ರೇಲ್ ಮತ್ತೊಂದು ಸುತ್ತಿನ ಭೀಕರ ದಾಳಿಯನ್ನು ಆರಂಭಿಸಿದೆ. ಭಾನುವಾರ ಬೆಳಗಿನವರೆಗೂ ಈ ದಾಳಿಗಳು ಮುಂದುವರೆದಿವೆ.

ಬೈರುತ್ ಬಳಿಯ ನಿರ್ದಿಷ್ಟ ಗುರಿಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ದೃಢಪಡಿಸಿದೆ. ಅಲ್ಲದೆ ಇಸ್ರೇಲ್ ಭೂಪ್ರದೇಶದ ಮೇಲೆ ಲೆಬನಾನ್ ಕಡೆಯಿಂದ ಸುಮಾರು 30 ರಾಕೆಟ್​ಗಳನ್ನು ಹಾರಿಸಲಾಗಿದೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: 'ನಮಗೆ ಬೆಂಬಲ ನೀಡಿ, ನೀಡದಿರಿ ನಾವು ಯುದ್ಧ ಗೆದ್ದು ನಾಗರಿಕತೆಯನ್ನು ರಕ್ಷಿಸುತ್ತೇವೆ': ಇಸ್ರೇಲ್ ಪ್ರಧಾನಿ ನೆತನ್ಯಾಹು - Israel PM Netanyahu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.