ETV Bharat / state

ಬೆಂಗಳೂರು: ಭಾರಿ ಮಳೆಗೆ ಅಪಾರ್ಟ್​ಮೆಂಟ್ ಕಂಪೌಂಡ್ ಕುಸಿತ, 20ಕ್ಕೂ ಹೆಚ್ಚು ಬೈಕ್​ಗಳು ಜಖಂ - Bengaluru Rain - BENGALURU RAIN

ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಬಿನ್ನಿಪೇಟೆಯ ಪಾರ್ಕ್​ ವೆಸ್ಟ್​ ಅಪಾರ್ಟ್​ಮೆಂಟ್​ನ ಆವರಣ ಗೋಡೆ ಕುಸಿದು ಹಲವು ಬೈಕ್​ಗಳು ಜಖಂಗೊಂಡರೆ, ಇನ್ನೊಂದೆಡೆ ಮಹದೇವಪುರ ರಸ್ತೆಗಳು ನೀರಿನಿಂದಾವೃತವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.

Bengaluru Rain
ಬಿನ್ನಿಪೇಟೆಯ ಪಾರ್ಕ್ ವೆಸ್ಟ್​ ಅಪಾರ್ಟ್​ಮೆಂಟ್ (ETV Bharat)
author img

By ETV Bharat Karnataka Team

Published : Oct 6, 2024, 12:28 PM IST

Updated : Oct 6, 2024, 3:18 PM IST

ಬೆಂಗಳೂರು: ಶನಿವಾರ ಸುರಿದ ಭಾರಿ ಮಳೆಗೆ ಪಶ್ಚಿಮ ವಲಯದ ಬಿನ್ನಿಪೇಟೆ ಪಾರ್ಕ್ ವ್ಯೂವ್ ಅಪಾರ್ಟ್ಮೆಂಟ್​ನ 7 ಅಡಿ ಎತ್ತರದ, ಸುಮಾರು 10 ಅಡಿಯಷ್ಟು ಉದ್ದದ ಕಂಪೌಂಡ್ ಕುಸಿದು ಬಿದ್ದಿದೆ. ಗೋಡೆ ರಸ್ತೆ ಮೇಲೆ ಉರುಳಿ, ಮನೆ ಮುಂದೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಬೈಕ್​ಗಳು ಜಖಂಗೊಂಡಿವೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಅಪಾರ್ಟ್ಮೆಂಟ್ ಸಿಬ್ಬಂದಿಯ ಸಹಕಾರದೊಂದಿಗೆ ಗೋಡೆಯ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿದರು. ಇನ್ನು, ಇಟಿಎ ಮಾಲ್ ಬಳಿ ಕುಸಿದಿರುವ ಗೋಡೆಯ ಅವಶೇಷಗಳನ್ನು ತೆರವುಗೊಳಿಸಿ ತೊಂದರೆಗೆ ಸಿಲುಕಿದ್ದ ನಿವಾಸಿಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.

ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಜಲಾವೃತ: ಯಲಹಂಕ ವಲಯದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್​ನ ಸುಮಾರು 50 ಅಡಿ ಕಂಪೌಂಡ್ ಕುಸಿದು ಬಿದ್ದಿರುವ ಕಾರಣ, ಯಲಹಂಕ ಕೆರೆ ಹಾಗೂ ಅಪಾರ್ಟ್ಮೆಂಟ್ ಮಧ್ಯೆ ಇರುವ ಖಾಲಿ ಜಾಗದಲ್ಲಿ ನಿಂತಿದ್ದ ನೀರು ಅಪಾರ್ಟ್ಮೆಂಟ್‌ನೊಳಗೆ ನುಗ್ಗಿದೆ. ರಾತ್ರಿಯಿಂದ ಸುಮಾರು 4 ಅಡಿ ನೀರು ನಿಂತಿದ್ದು, ಪಾಲಿಕೆಯ ಗ್ಯಾಂಗ್‌ಮ್ಯಾನ್ ತಂಡ, ಎಸ್.ಡಿ.ಆರ್.ಆಫ್, ಅಗ್ನಿಶಾಮಕ ತಂಡಗಳು ಪಂಪ್‌ಸೆಟ್​ಗಳ ಮೂಲಕ ನೀರು ಹೊರಹಾಕುತ್ತಿವೆ.

ಬೆಂಗಳೂರಲ್ಲಿ ಮಳೆ ಅವಾಂತರ (ETV Bharat)

ಯಲಹಂಕ ಕೆರೆಗೆ ಸುಮಾರು 10 ಕೆರೆಗಳ ನೀರು ಬರುತ್ತಿದ್ದು, ಇಲ್ಲಿಂದ ಜಕ್ಕೂರು ಕೆರೆಗೆ ನೀರು ಹೋಗುತ್ತಿದೆ. ಕೆರೆ ಭಾಗದಿಂದ 25 ಅಡಿ ಕೆಳಭಾಗದಲ್ಲಿ ಅಪಾರ್ಟ್ಮೆಂಟ್ ಇರುವ ಕಾರಣ ಹಾಗೂ ಗೋಡೆ ಕುಸಿದು ಪ್ರದೇಶ ಜಲಾವೃತವಾಗಿದೆ. ಗೋಡೆ ಕುಸಿದಿರುವ ಭಾಗದಲ್ಲಿ ಸ್ಯಾಂಡ್ ಬ್ಯಾಗ್​ಗಳನ್ನು ಅಳವಡಿಸಲಾಗುತ್ತಿದೆ. ಅಪಾರ್ಟ್ಮೆಂಟ್​ನಲ್ಲಿ ವಾಸಿಸುವ ನಿವಾಸಿಗಳಿಗೆ ತಿಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ನೀರು ಹೊರ ಹಾಕಿ ತ್ಯಾಜ್ಯ ತೆರವುಗೊಳಿಸುವ ಕಾರ್ಯ ಮಾಡಲಾಗುವುದು. ಯಲಹಂಕ ವಲಯದ ಎಲ್ಲ ಹಿರಿಯ ಅಧಿಕಾರಿಗಳು ಸಿಬ್ಬಂದಿ ವರ್ಗ ಸ್ಥಳದಲ್ಲಿದ್ದು, ತೆರವು ಕಾರ್ಯ ನಡೆಸುತ್ತಿದ್ದಾರೆ‌.

14 ಮರಗಳು ಧರೆಗೆ: ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆಲವೆಡೆ ಸಮಸ್ಯೆಯಾಗಿದ್ದು, 15 ಮರಗಳು‌ ಹಾಗೂ 44 ಮರದ ರೆಂಬೆ-ಕೊಂಬೆಗಳು ಧರೆಗುರುಳಿವೆ. ಸದ್ಯ ಪಾಲಿಕೆಯ ನಿಯಂತ್ರಣ ಕೊಠಡಿ ತಂಡಗಳು ಹಾಗೂ ಮರ ತೆರವು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ತೆರವು ಕಾರ್ಯಾಚರಣೆ ನಡೆಸುತ್ತಿವೆ.

Bengaluru Rain
ಜಲಾವೃತಗೊಂಡ ಬಿನ್ನಿಪೇಟೆ ಅಪಾರ್ಟ್​ಮೆಂಟ್​ (ETV Bharat)

ವಿಜಯನಗರದ ಮಧುವನದ ಬಳಿ ಮನೆಗಳಿಗೆ ನುಗ್ಗಿದ ನೀರು: ದಕ್ಷಿಣ ವಲಯ ವಿಜಯನಗರದ ಮಧುವನದ ಬಳಿ ರಾಜಕಾಲುವೆಯ ಬಳಿಯಿದ್ದ ಸ್ಯಾನಿಟರಿ ಲೈನ್‌ನಲ್ಲಿ ನೀರು ಓವರ್ ಫ್ಲೋ ಆಗಿದ್ದು, ಸುಮಾರು 10 ಮನೆಗಳಿಗೆ ನುಗ್ಗಿದೆ. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸುತ್ತಿದ್ದಾರೆ.

ಪಾಲಿಕೆ ವ್ಯಾಪ್ತಿಯ ಯಲಹಂಕ ವಲಯ, ಪಶ್ಚಿಮ ವಲಯ ಹಾಗೂ ದಕ್ಷಿಣ ವಲಯಗಳಲ್ಲಿ ಮಾತ್ರ ಕೆಲವೆಡೆ ಸಮಸ್ಯೆಯಾಗಿದ್ದು, ಇನ್ನುಳಿದ ವಲಯಗಳಲ್ಲಿ ಯಾವುದೇ ಪ್ರಮುಖ ಸಮಸ್ಯೆಗಳಾಗಿಲ್ಲ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದ್ವೀಪದಂತಾದ ಮಹದೇವಪುರ ರಸ್ತೆಗಳು: ಮಹದೇವಪುರ ವಿಧಾನಸಭಾ ಕ್ಷೇತ್ರದ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಇಂದು ಬೆಳಗ್ಗೆ ಸಾರ್ವಜನಿಕರು ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸ್ತೆಗಳಿದು ಆಕ್ರೋಶ ವ್ಯಕ್ತಪಡಿಸಿದರು.

Bengaluru Rain
ಬಿಬಿಎಂಪಿ ತೆರವು ಕಾರ್ಯಾಚರಣೆ (ETV Bharat)

ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿ, "ಮಹದೇವಪುರ ವಲಯದ ಜನರು ಸಾವಿರಾರು ಕೋಟಿ ರೂ. ತೆರಿಗೆ ಕಟ್ಟುತ್ತಾರೆ. ಆದರೂ ಸಣ್ಣ ಮಳೆಗೂ ಇಲ್ಲಿನ ರಸ್ತೆಗಳು ದ್ವೀಪದಂತಾಗುತ್ತವೆ" ಎಂದರು.

"ಬಿಬಿಎಂಪಿ ರಸ್ತೆ ಸುಧಾರಣೆಯ ನೆಪದಲ್ಲಿ ನೂರಾರು ಕೋಟಿ ಹಣ ವ್ಯಯ ಮಾಡುತ್ತದೆ. ಮತ್ತದೇ ಮಳೆ ಬಂದಾಗ ಇದೇ ರೀತಿಯ ಕೆಟ್ಟ ಅವ್ಯವಸ್ಥೆ ಮುಂದುವರಿಯುತ್ತದೆ. ಇದು ಸರ್ಕಾರದ ಹಾಗೂ ಬಿಬಿಎಂಪಿಯ ಬೇಜವಾಬ್ದಾರಿತನ, ಭ್ರಷ್ಟ ಗುಳಿತನ ಹಾಗೂ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಸ್ಥಳೀಯ ಶಾಸಕಿ ಮಂಜುಳಾ ಲಿಂಬಾವಳಿ ಸೇರಿದಂತೆ ಬಿಬಿಎಂಪಿಯ ಯಾವ ಉನ್ನತ ಅಧಿಕಾರಿಗಳೂ ಸಹ ಇತ್ತ ಕಡೆ ಗಮನ ಹರಿಸಿಲ್ಲ. ಇಲ್ಲಿನ ನಾಗರಿಕರ ಬದುಕು ನರಕ ಸದೃಶವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

Bengaluru Rain
ಮಹದೇವಪುರ ರಸ್ತೆಗಳು (ETV Bharat)

ಇದನ್ನೂ ಓದಿ: ಬೆಂಗಳೂರಲ್ಲಿ ವರುಣಾರ್ಭಟ: ವಾಹನ ಸವಾರರ ಪರದಾಟ, ಇನ್ನೂ 4 ದಿನ ಮಳೆ ಮುನ್ಸೂಚನೆ - Bengaluru Rain

Last Updated : Oct 6, 2024, 3:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.