ETV Bharat / sports

ಮಹಿಳಾ ಟಿ20 ವಿಶ್ವಕಪ್​: ಇಂದು ಭಾರತ-ಪಾಕ್​​ ಮ್ಯಾಚ್; ಸಮಯ, ನೇರಪ್ರಸಾರದ ಮಾಹಿತಿ - India vs Pakistan Match - INDIA VS PAKISTAN MATCH

ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್​ ಪಂದ್ಯ ನಡೆಯಲಿದೆ. ಉಭಯ ತಂಡಗಳ ಮುಖಾಮುಖಿ​, ಸಮಯ, ನೇರಪ್ರಸಾರದ ಮಾಹಿತಿ ಇಲ್ಲಿದೆ.

ಭಾರತ-ಪಾಕಿಸ್ತಾನ​​ ಮುಖಾಮುಖಿ
ಭಾರತ ಮತ್ತು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಗಳು (IANS)
author img

By ETV Bharat Sports Team

Published : Oct 6, 2024, 12:50 PM IST

ಹೈದರಾಬಾದ್​: ಐಸಿಸಿ ಮಹಿಳಾ ಟಿ20 ವಿಶ್ವಕಪ್​ನಲ್ಲಿಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಭಾರತದ ಪಾಲಿಗೆ ಈ ಪಂದ್ಯ ಮಹತ್ವದ್ದು. ಇದರ ಜೊತೆಗೆ, ಸೆಮೀಸ್​ ರೇಸ್​ನಲ್ಲಿ ಉಳಿಯಬೇಕಾದರೆ ಮುಂದಿನ ಎಲ್ಲ 3 ಪಂದ್ಯಗಳನ್ನೂ ಗೆಲ್ಲುವುದು ಕೂಡಾ ಅನಿವಾರ್ಯವಾಗಿದೆ.

ಮತ್ತೊಂದೆಡೆ, ತನ್ನ ಮೊದಲ ಪಂದ್ಯದಲ್ಲೇ ಏಷ್ಯಾಕಪ್​ ಚಾಂಪಿಯನ್ಸ್​ ಶ್ರೀಲಂಕಾವನ್ನು 31 ರನ್‌ಗಳಿಂದ ಮಣಿಸಿರುವ ಪಾಕ್,​ ಈ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಭಾರತವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುತ್ತಿದ್ದರೆ, ಫಾತಿಮಾ ಸನಾ ಪಾಕ್​ ನಾಯಕತ್ವ ವಹಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಹೇಗಿದೆ ಪೈಪೋಟಿ?​: ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 15 ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ​ ಇಂಡಿಯಾ 12 ಪಂದ್ಯಗಳಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದರೆ, ಪಾಕಿಸ್ತಾನ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ.

ಪಿಚ್ ಹೇಗಿದೆ?: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೂ ಒಟ್ಟು 99 ಟಿ20 ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 46 ಬಾರಿ ಗೆಲುವು ಸಾಧಿಸಿದರೆ, ಚೇಸಿಂಗ್​ ತಂಡಗಳು 52 ಬಾರಿ ಜಯಿಸಿವೆ. ಮೊದಲ ಇನ್ನಿಂಗ್ಸ್​ ಸ್ಕೋರ್​ 141 ರನ್​ ಆಗಿದ್ದು, ಎರಡನೇ ಇನ್ನಿಂಗ್ಸ್​ ಸ್ಕೋರ್​ 124 ಆಗಿದೆ. ಈ ಮೈದಾನದಲ್ಲಿ ದಾಖಲದಾದ ಗರಿಷ್ಠ ಸ್ಕೋರ್​ 212 ಆಗಿದ್ದು, 55 ಲೋ ಸ್ಕೋರ್​ ಆಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ

ನೇರಪ್ರಸಾರ: ಈ ಪಂದ್ಯದ ನೇರಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿರಲಿದ್ದು, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲೂ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಸಂಭಾವ್ಯ ತಂಡಗಳು-ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಆಶಾ ಶೋಭನಾ, ರಾಧಾ ಯಾದವ್, ರೇಣುಕಾ ಸಿಂಗ್.

ಪಾಕಿಸ್ತಾನ: ಮುನಿಬಾ ಅಲಿ (ವಿಕೆಟ್ ಕೀಪರ್), ಗುಲ್ ಫಿರೋಜ್, ಸಿದ್ರಾ ಅಮೀನ್, ಒಮೈಮಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟಿ20: ಭಾರತ ತಂಡದಿಂದ ಸ್ಟಾರ್​ ಆಲ್​ರೌಂಡರ್​ ಔಟ್​! - India Bangladesh T20 Series

ETV Bharat Logo

Copyright © 2025 Ushodaya Enterprises Pvt. Ltd., All Rights Reserved.