ಗಂಗಾವತಿ (ಕೊಪ್ಪಳ): ಜಿಲ್ಲಾ ಪಂಚಾಯಿತಿಯ ಇಲ್ಲಿನ ಉಪ ವಿಭಾಗ ಕಚೇರಿಯ ಕಿರಿಯ ಎಂಜಿನಿಯರ್ ಆಗಿದ್ದ ಡಿ.ಎಂ.ರವಿ ಕುಮಾರ್ ಸೇವಾಲೋಪ ಎಸಗಿದ ಹಿನ್ನೆಲೆ ಅಮಾನತಾಗಿದ್ದರು. ಆದರೆ ನೌಕರ ಕೆಎಟಿಗೆ ಹೋಗಿ ಮೇಲಾಧಿಕಾರಿಯ ಆದೇಶಕ್ಕೆ ತಡೆ ತಂದಿದ್ದರು.
ಈ ಹಿನ್ನೆಲೆ ತಾವು ಹೊರಡಿಸಿದ್ದ ಅಮಾನತು ಆದೇಶ ಕೂಡಲೆ ಹಿಂಪಡೆದಿದ್ದು, ಇದೀಗ, ಡಿ.ಎಂ. ರವಿ ಅವರ ಸೇವೆ ಮುಂದುವರೆಸಲು ಜಿಲ್ಲಾ ಪಂಚಾಯಿತಿ ಸಿಇಓ ರಘುನಂದನ್ ಮೂರ್ತಿ ಅವಕಾಶ ನೀಡಿದ್ದಾರೆ.
ಸಾಕಷ್ಟು ವಿವಾದಗಳಿಂದಲೇ ಗುರುತಿಸಿಕೊಂಡಿರುವ ಜಿ.ಪಂ ಇಲಾಖೆಯ ನೌಕರ ಡಿ.ಎಂ.ರವಿಕುಮಾರ್, ಮೂಲತಃ ಪಂಚಾಯತ್ ರಾಜ್ ಇಲಾಖೆಯ ನೌಕರನಲ್ಲ. ಹಟ್ಟಿ ಚಿನ್ನದಗಣಿಯಲ್ಲಿ ಆಕೃತಿ ಫೋರ್ ಮ್ಯಾನ್ ಆಗಿದ್ದರು.
ನೌಕರನನ್ನು ಇಲ್ಲಿನ ಜಿಲ್ಲಾ ಪಂಚಾಯಿತಿ ಉಪ ವಿಭಾಗಕ್ಕೆ ಆಕೃತಿ ರಚನೆಯ (ಡ್ರಾಫ್ಟ್ ಮ್ಯಾನ್) ಉದ್ದೇಶಕ್ಕೆ ನಿಯೋಜನೆ ಮಾಡಲಾಗಿತ್ತು. ಇದೀಗ ಸರ್ಕಾರದ ಆದೇಶದ ಮೆರೆಗೆ ತಕ್ಷಣದಿಂದ ಜಾರಿಯಾಗುವಂತೆ ಮಾತೃ ಸಂಸ್ಥೆಗೆ ನಿಯೋಜನೆ ಮಾಡಲಾಗಿದೆ.