ಕೊಪ್ಪಳ (ಗಂಗಾವತಿ): ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾದರೆ ಇಹಲೋಕ ತ್ಯಜಿಸಿದ ವ್ಯಕ್ತಿಗಳ ಮೃತದೇಹಗಳನ್ನು ಪ್ರವಾಹ ತಗ್ಗುವವರೆಗೂ ಮನೆಯಲ್ಲಿಟ್ಟುಕೊಂಡು ಪರದಾಡಬೇಕಾದ ದುಃಸ್ಥಿತಿ ತಾಲೂಕಿನ ಚಿಕ್ಕತಂಕಲ್ ಗ್ರಾಮದ ಜನರಿಗೆ ಎದುರಾಗಿದೆ.
ಗ್ರಾಮದ 12 ಸಮುದಾಯಗಳಿಗೆ ಸೇರಿದ ರುದ್ರಭೂಮಿ ಚಿಕ್ಕಜಂತಕಲ್-ಕಂಪ್ಲಿ ಮಧ್ಯೆ ಇರುವ ತುಂಗಭದ್ರಾ ನದಿ ದಂಡೆಯಲ್ಲಿದೆ. ಯಾರಾದರೂ ವ್ಯಕ್ತಿಗಳು ಸಾವನ್ನಪ್ಪಿದರೆ ಈ ನದಿಯ ದಂಡೆಯ ಮಾರ್ಗದಲ್ಲಿಯೇ ಸಾಗಿ ರುದ್ರಭೂಮಿಯನ್ನು ಸೇರಿಕೊಳ್ಳಬೇಕು.
ನದಿಯಲ್ಲಿ ಪ್ರವಾಹ ಉಂಟಾದರೆ ಸಾವನ್ನಪ್ಪಿದ ವ್ಯಕ್ತಿಗಳ ಮೃತದೇಹವನ್ನು ಮೃತನ ಕುಟುಂಬಿಕರು ಪ್ರವಾಹ ತಗ್ಗುವವರೆಗೂ ಮನೆಯಲ್ಲಿಯೇ ಇರಿಸಿಕೊಂಡು ಪಡಬಾರದ ಸಂಕಷ್ಟ ಪಡುತ್ತಿದ್ದಾರೆ. ಇರುವ ರುದ್ರಭೂಮಿಗೆ ಗ್ರಾಮದಿಂದ ಸುರಕ್ಷಿತವಾದ ರಸ್ತೆಯಿಲ್ಲ. ನದಿ ಪ್ರವಾಹದ ಮಧ್ಯೆಯೇ ಜೀವದ ಹಂಗು ತೊರೆದು ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಬೇಕಾದ ಶೋಚನೀಯ ಸ್ಥಿತಿ ಜಂತಕಲ್ ಗ್ರಾಮಸ್ಥರಿಗೆ ಉಂಟಾಗಿದೆ. ಈ ಬಗ್ಗೆ ಪರ್ಯಾಯ ರುದ್ರಭೂಮಿಗೆ ಕಳೆದ ಒಂದು ದಶಕದಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.
ಓದಿ: ನಾಳೆ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿರುವ ಸಿಎಂ.. ಜಿಲ್ಲಾಡಳಿತದಿಂದ ಸಕಲ ಸಿದ್ಧತೆ