ಗಂಗಾವತಿ: ಇಲ್ಲಿನ ದುರುಗಮ್ಮಹಳ್ಳವು ತುಂಬಿ ಹರಿಯುತ್ತಿದೆ. ಕಳೆದ ಹಲವು ವರ್ಷದಿಂದ ಸತ್ತಪ್ರಾಣಿಗಳ ಕಳೇಬರ ಬೀಸಾಡುವ, ತ್ಯಾಜ್ಯ ಎಸೆಯುವಂತಾಗಿದ್ದ ಹಳ್ಳಕ್ಕೆ, ಈಗ ಮರುಜೀವ ಸಿಕ್ಕಿದೆ.
ದಂತ ವೈದ್ಯ ಶಿವಕುಮಾರ ಮಾಲಿಪಾಟೀಲ್ ಅವರು 'ನಮ್ಮೂರು ನಮ್ಮಹಳ್ಳ' ಎಂಬ ಘೋಷ ವಾಕ್ಯದೊಂದಿಗೆ ಹುಡುಗರನ್ನು ಕಟ್ಟಿಕೊಂಡು, ಸ್ವಚ್ಛಗೊಳಿಸಿದ ಹಳ್ಳದಲ್ಲಿ ಮಳೆಯ ನೀರು ಹರಿದು ಹೋಗುತ್ತಿದ್ದು, ನೂರಾರು ಕೈಗಳ ಪರಿಶ್ರಮ ಈಗ ಫಲಿಸಿದೆ.
ನಗರದ ಅರ್ಧ ಭಾಗ ವ್ಯಾಪಿಸಿಕೊಂಡಿರುವ ಹಳ್ಳವನ್ನು ನಗರಸಭೆ ಸ್ವಚ್ಛಗೊಳಿಸದೇ ನಿರ್ಲಕ್ಷ್ಯ ಮಾಡಿತ್ತು. ಅದರ ಪರಿಣಾಮವಾಗಿ ಅಪಾರ ಪ್ರಮಾಣದ ತ್ಯಾಜ್ಯ ಶೇಖರಣೆಯಾಗಿ ನೀರು ಹರಿದುಹೋಗದಂತೆ ಕಟ್ಟಿಕೊಂಡಿತ್ತು. ವೈದ್ಯನ ಪರಿಸರ ಕಾಳಜಿ, ಉತ್ಸಾಹದಿಂದ ಹಳ್ಳಕ್ಕೆ ಮರುಜೀವ ಬಂದಿದೆ.